ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟೆ ಹತ್ಯೆಯ ರಹಸ್ಯ ಬಯಲಾಗಿದೆ, ಸುಪಾರಿ ನೀಡಿ ಸುಹಾಸ್ ಶೆಟ್ಟೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂಬುದು ಪೋಲಿಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಮೃತ ಫಾಜೀಲ್ ನ ಸಹೋದರ ಆದೀಲ್ ಎಂಬಾತ ಸಫ್ವಾನ್ ಎಂಬಾತನಿಗೆ 5 ಲಕ್ಷ ರೂಪಾಯಿಯನ್ನು ನೀಡಿ ಕೊಲೆ ಮಾಡಲು ತಿಳಿಸಿದ್ದಾನೆ. ಅದರಂತೆ 8 ಜನರಿದ್ದ ಗುಂಪು ಸುಹಾಸ್ ಶೆಟ್ಟೆಯ ಚಲನವಲನವನ್ನು ಗಮನಿಸಿಕೊಂಡು ಮೇ. 1 ರ ರಾತ್ರಿ ಕೊಲೆ ಮಾಡಿದ್ದಾರೆ.
ಮೇ. 1 ರಂದು ದಿನ ಪೂರ್ತಿ ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿದ್ದ ಸಫ್ವಾನ್ ಗುಂಪು ಅಂದೇ ರಾತ್ರಿ ಮಂಗಳೂರಿನ ಹೊರವಲಯದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಅವರೊಂದಿಗೆ 2 ಜನ ಬುರ್ಖಾ ಧಾರಿ ಮಹಿಳೆಯರಿದ್ದು ಕೊಲೆ ಗಡುಕರಿಗೆ ಸಹಕರಿಸುತ್ತಿದ್ದ ಕುರಿತಾಗಿಯೂ ತನಿಖೆ ನಡೆಯುತ್ತಿದೆ.
ಈ ಕೊಲೆ ಫಾಜೀಲ್ ಹತ್ಯೆಯ ಪ್ರತಿಕಾರ ಎಂಬುದು ಸ್ವಷ್ಟವಾಗಿದೆ.
0 ಕಾಮೆಂಟ್‌ಗಳು