ಪುತ್ತೂರು: ಮಂಜಲ್ಪಡ್ಪುವಿನಲ್ಲಿ ಹಾಕಲಾಗಿದ್ದ ಶಾಸಕ ಅಶೋಕ್ ರೈ ಅವರ ಬ್ಯಾನರನ್ನು ಹರಿಯಲಾಗಿದ್ದು ಘಟನೆಯ ಬಗ್ಗೆ ಕಾಂಗ್ರೆಸ್ ನಗರ ಪೊಲೀಸರಿಗೆ ದೂರು ನೀಡಿದೆ.
ಸುದಾನ ಶಾಲೆಯ ಬಳಿ ಇರುವ ಓವರ್ ಬ್ರಿಡ್ಜ್ ಬಳಿ ಸ್ವಾಗತ ಕೋರಿ ಹಾಕಲಾಗಿದ್ದ ಶಾಸಕ ಅಶೋಕ್ ರೈ ಅವರ ಬ್ಯಾನರನ್ನು ಕಿಡಿಗೇಡಿಗಳು ಹರಿದು
ಹಾಕಿದ್ದರು. ಈ ಹಿಂದೆ ಮೂರು ಬಾರಿ ಇದೇ ಜಾಗದಲ್ಲಿ ಹಾಕಿದ್ದ ಬ್ಯಾನರನ್ನು ಹರಿಯಲಾಗಿತ್ತು. ಘಟನೆಯ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಹಾಕಿದ್ದರು. ಈ ಹಿಂದೆ ಮೂರು ಬಾರಿ ಇದೇ ಜಾಗದಲ್ಲಿ ಹಾಕಿದ್ದ ಬ್ಯಾನರನ್ನು ಹರಿಯಲಾಗಿತ್ತು. ಘಟನೆಯ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ನಗರ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಯತೀಶ್ ಕೋಡಿಂಬಾಡಿ, ಸತೀಶ್ ನಿಡ್ಪಳ್ಳಿ ಹಾಗೂ ದಾಮೋದರ್ ಮುರ ದೂರು ನೀಡಿದ ನಿಯೋಗದಲ್ಲಿದ್ದರು
0 ಕಾಮೆಂಟ್‌ಗಳು