HEADLINES

ಖಾಸಗಿ ಕಟ್ಟಡ ಕಟ್ಟುವಾಗ ಸಾರ್ವಜನಿಕ ಕೆರೆಯನ್ನು ಒತ್ತವರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ತಹಸೀಲ್ದಾರ್, ನಗರಸಭೆ, ನಗರಯೋಜನಾ ಪ್ರಾಧಿಕಾರಕ್ಕೆ ದೂರು

ಪುತ್ತೂರು: ಪುತ್ತೂರು ನಗರಸಭೆ ಕಟ್ಟಡದ ಬಳಿಯೇ ಕಟ್ಟಡ ನಿರ್ಮಾಣ ಮಾಡುವ ವೇಳೆ ಭೂ ಅತಿಕ್ರಮಣ ಮತ್ತು ಸಾರ್ವಜನಿಕ ಕೆರೆಯನ್ನು ಒತ್ತಯುವರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ತಹಸೀಲ್ದಾರ್, ನಗರಸಭೆ, ನಗರಯೋಜನಾ ಪ್ರಾಧಿಕಾರಕ್ಕೆ ದೂರು ನೀಡಿರುವುದಾಗಿ ನೆಹರುನಗರ ನಿವಾಸಿ ಸಂತೋಷ್ ಶೆಟ್ಟಿ ಎಂಬವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪುತ್ತೂರು ಹೋಬಳಿಯ ಪುತ್ತೂರು ಕಸಬಾ ಗ್ರಾಮದ ಸ.ನಂ.೧೩೩/೯ ಎ ೦.೦೨ ಎಕ್ರೆ ಸರಕಾರಿ ಸ್ಥಳದಲ್ಲಿ ಇದ್ದ ಬಾವಿ ಅನಾದಿ ಕಾಲದಿಂದ ಸ್ಥಳೀಯ ದೇವಿಯ ಆರಾಧನೆಗೆ ನೀರು ಮತ್ತು ಈ ಭಾಗದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಗೆ ಬೇಕಾದ ನೀರು ಮತ್ತು ಸ್ಥಳೀಯ ವಾಸಿಗಳ ಗೃಹೋಪಯೋಗಿ ಮತ್ತು ದನಕರು ಇತ್ಯಾದಿಗಳಿಗೆ ಅನಾದಿ ಕಾಲದಿಂದ ಸುಮಾರು ೮೦೦ ವರ್ಷಗಳ ಹಿಂದಿನಿAದ ಉಪಯೋಗಿಸುತ್ತಿದ್ದ, ಆಯಾತಕಾರದ ಕಲ್ಲು ಘಟನೆ ಮತ್ತು ೧೫ ಅಡಿ ಅಗಲದ ಕಲ್ಲಿನ ತಡೆಗೋಡೆ ಇದ್ದ ಮತ್ತು ಸುಮಾರು ೯೦೦ ಚದರ ಅಡಿಯ ಆಯತಾಕರಾದ ಕೆರೆ ಇದ್ದು ಸದ್ರಿ ಕೆರೆಗೆ ತಾಗಿಕೊಂಡ ಸ್ಥಳವಾದ ಸ.ನ. ೧೩೩/೯ಬಿ-೦.೦೬ ಎಕ್ರೆ ಸ್ಥಳವನ್ನು ಸ್ಥಳೀಯ ನಿವಾಸಿ ವಕೀಲರಾದ ಅರುಣಾ ಕೋಂ ದಿನಕರ ರೈ ಎಂಬವರು ಕ್ರಯಪತ್ರದ ಮೂಲಕ ಖರೀದಿ ಮಾಡಿ ಮೇಲಿನ ಬಾವಿಯನ್ನು ಮುಚ್ಚಿ ಸಮತ್ತಟ್ಟು ಮಾಡಿ ವಕೀಲರಾದ ಅರುಣಾ ಕೋಂ ದಿನಕರ ರೈ ಖರೀದಿ ಮಾಡಿದ ಸ್ಥಳವನ್ನು ತೋರಿಸಿ ಪುತ್ತೂರು ನಗರಸಭೆಯಿಂದ ೬ ಸೆಂಟ್ಸ್ ಸ್ಥಳದಲ್ಲಿ ಬಿಲ್ಡಿಂಗ್ ನಕ್ಷೆ ಪರವಾನಿಗೆ ಮಾಡಿಸಿ ಭಾಗಶಃ ಕೆರೆಯ ಜಾಗವನ್ನು ಒತ್ತುವರಿ ಮಾಡಿ ಮತ್ತು ಬಿಲ್ಡಿಂಗ್ ಕಾಮಗಾರಿ ಮುಗಿದ ಬಳಿಕ  ಉಳಿಕೆ ಸರಕಾರಿ ಬಾವಿ ಇದ್ದ ಸ್ಥಳವನ್ನು ಪಾರ್ಕಿಂಗ್ ಮಾಡುವ ಇರಾದೆ ಇಟ್ಟುಕೊಂಡು 'ಎಡಿಆರ್ ಹೈಟ್ಸ್'ಬೃಹತ್ ವಾಣಿಜ್ಯ ಮಳಿಗೆಯನ್ನು ನಿರ್ಮಿಸುತ್ತಿದ್ದು, ಕೂಡಲೇ ಸೆಟ್ ಬ್ಯಾಕ್ ಇಲ್ಲದ ಕಟ್ಟಡವನ್ನು ನಿರ್ಮಾಣವನ್ನು ನಿಲ್ಲಿಸುವಂತೆ ಮತ್ತು ಸರಕಾರಿ ಬಾವಿಯನ್ನು ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಮಾಡಿಕೊಡಬೆಕಾಗಿ ದೂರನ್ನು ನೀಡಿರುವುದಾಗಿ ಹೇಳಿದ ಅವರು ಈ ಕುರಿತು ಅರುಣಾ ದಿನಕರ್ ರೈ ಅವರ ವಿರುದ್ಧ ಸರಕಾರಿ ಜಮೀನಿನಲ್ಲಿ ಬಾವಿ ಯನ್ನು ಒತ್ತುವರಿ ಮುಚ್ಚಿದ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿರುವುದು ನಮ್ಮ ಅರಿವಿಗೆ ಬಾರದೇ ಇದ್ದುದ್ದರಿಂದ ನಾನು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಕೆಯನ್ನು ವಕೀಲರಾದ ಚಿದಾನಂದ ರೈ ಕೋಡಿಂಬಾಡಿ ಮತ್ತು ಹೈಕೋರ್ಟ್ ವಕೀಲರಾದ ಗೋವಿಂದರಾಜ್ ಅವರ ಮೂಲಕ ಸಲ್ಲಿಸಿದ್ದೇನೆ. ಈ ಪ್ರಕರಣದ ಕುರಿತು ನ್ಯಾಯಾಧೀಶರು ತನಿಖೆಗೆ ಆದೇಶ ನೀಡಿದ್ದಾರೆ.
ನನ್ನ ಮೇಲೆ ಸುಳ್ಳು ಆಪಾದನೆ:
ನಾನು ರೂ. ೬೫ಲಕ್ಷ ಯಾರಿಂದಲೂ ಪಡೆದಿಲ್ಲ. ಆದರೆ ನನ್ನ ಮೇಲೆ ದಿನಕರ್ ರೈ ವಕೀಲರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಅಶ್ಮಿ ಕಂಪಾರ್ಟ್ನಲ್ಲಿ ಬಾರ್ ಲೈಸನ್ಸ್ಗೆ ೨೦೧೯ರ ಜುಲೈಯಲ್ಲಿ ನಾನು ಕಟ್ಟಿದ್ದು, ಸೆಪ್ಟೆಂಬರ್ ನಂತರ ಹಣ ಮಾಡಿದ್ದು ಅವರು. ದಿನಕರ್ ರೈ ಅವರ ಪುತ್ರ ಅಧೀಕ್ಷ್ ರೈ ಅವರೊಂದಿಗೆ ಆಗಿರುವ ಅಗ್ರಿಮೆಂಟ್ ಪ್ರಕಾರ ಅವರು ಅಲ್ಲಿನ ನೀರಿನ ಬಿಲ್ಲು, ವಿದ್ಯುತ್ ಬಿಲ್, ನಗರಸಭೆ ವ್ಯಾಪಾರ ಶುಲ್ಕ ಎಲ್ಲವೂ ಅವರೇ ಕಟ್ಟಬೇಕಾಗಿತ್ತು. ಅದನ್ನು ಪಾವತಿಸದೆ ಹಣ ಕೇಳುವುದು ಸರಿಯೇ ಎಂದು ಪ್ರಶ್ನಿಸಿದ ಸಂತೋಷ್ ಶೆಟ್ಟಿಯವರು ಈಗ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಲಯದ ತೀರ್ಮಾನಕೆಕ ನಾವು ಬದ್ದ ಎಂದು ಸಂತೋಷ್ ಶೆಟ್ಟಿಯವರು ಹೇಳಿದ್ದಾರೆ.


ಕೆರೆ ಇರುವ ಕುರಿತು ಅಡಂಗಲ್, ಚಿಟ್ಟೆ, ಕೈ ಬರಹ ಆರ್.ಟಿ.ಸಿ, ಪಹಣಿ ಪತ್ರ, ಎಫ್.ಎಂ.ಬಿ. ನಕ್ಷೆ, ನಗರಸಭೆಯಲ್ಲಿ ಕೆರೆ ಇದೆ ಎಂದು ಉಲ್ಲೇಖಸಿದ ದಾಖಲೆ ಪ್ರತಿ, ಸರ್ವೆ ಸಪ್ಲಿಮೆಂಟ್ ರಿಜಿಸ್ಟಿç ಮತ್ತು ಹಕ್ಕು ಬದಲಿಸುವ ಸಂದರ್ಭ ಮಾಡಿದ ವಂಚನೆಗಳಾದ ಖಾತೆ ಇಂಡೆಕ್ಸ್ ಸರಕಾರಿ ಜಾಗ ಹೈಡ್ ಮಾಡಿದ್ದು, ದಕ್ಷಿಣ ಕರೆ ಬದಲು ಸೌತ್ ಇಂಡಿಯಾ ಆರ್ಕೆಡ್ ಎಂದು ಬರೆದಿರುವ ದಾಖಲೆ ಇದೆ. ಮುಂದಿನ ದಿನಗಳಲ್ಲಿ ಇಂತಹ ಅತಿಕ್ರಮ ಮಾಡುವವರಿಗೆ ಎಚ್ಚರಿಕೆಯಾಗಿರಲಿ. ಇದು ನಮ್ಮ ಪ್ರಥಮ ಹೋರಾಟ. ಮುಂದೆ ಎಲ್ಲಿಯಾದರೂ ಸರಕಾರಿ ಬಾವಿ ಅತಿಕ್ರಮಣ ಆಗಿರುವುದನ್ನು ಸರಿಯಾದ ಮಾಹಿತಿ ಸಂಗ್ರಹ ನೀಡಿದರೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಸಂತೋಷ್ ಶೆಟ್ಟಿ ಹೇಳಿದರು.

 ದಿನಕರ್ ರೈ ಯವರ ಹೇಳಿಕೆ.
  ಅಪಾದನೆಗೆ ಸಂಬಂಧಿಸಿದ ದಿನಕರ್ ರೈ  ಯವರು ನಾನು ಖರೀದಿಸಿದ ಜಾಗದಲ್ಲಿ ಯಾವುದೇ ಸರಕಾರಿ ಕೆರೆ ಇರಲಿಲ್ಲ ಇದಕ್ಕೆ ಸಂಬಂದ ಪಟ್ಟ ದಾಖಲೆ ನನ್ನ ಬಳಿ ಇದೆ ಎಂದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು