HEADLINES

ರೋಟರಾಕ್ಟ್ ಕ್ಲಬ್ ಪುತ್ತೂರಿನ 49ನೇ ವರ್ಷದ ಪದಪ್ರದಾನ ಸಮಾರಂಭ ಯಶಸ್ವಿ

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ರೋಟರಾಕ್ಟ್ ಕ್ಲಬ್ ಪುತ್ತೂರು (2026–27)ರ 49ನೇ ವರ್ಷದ ಅಧ್ಯಕ್ಷರಾಗಿ ರೋ. ಶ್ರೀಕಾಂತ್ ಹಾಗೂ ಕಾರ್ಯದರ್ಶಿಯಾಗಿ ರೋ. ಸುಕನ್ಯಾ ಮತ್ತು ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ರೊ. PHF ದತ್ತಾತ್ರೇಯ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರಿನ ಯುವಜನ ಸೇವಾ ನಿರ್ದೇಶಕ ರೊ. PHF ಸುಬ್ಬಪ್ಪ ಕೈಕಂಬ, ರೋಟರಾಕ್ಟ್ ಜಿಲ್ಲೆ 3181ರ ಸಹಾಯಕ ಜಿಲ್ಲಾಪ್ರತಿನಿಧಿ ರೋ. ನವೀನ್ ರೈ ಬನ್ನೂರು ಹಾಗೂ ಕೆನರಾ ವಲಯ ಪ್ರತಿನಿಧಿ ರೋ. ಎಡ್ವರ್ಡ್ ಭಾಗವಹಿಸಿ ಶುಭ ಹಾರೈಕೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರೋಟರಾಕ್ಟ್ ಕ್ಲಬ್ ಪುತ್ತೂರಿನ ಸಭಾಪತಿ ರೊ. PHF ಶ್ರೀಧರ್ ಆಚಾರ್ಯ ಹಾಗೂ ನಿಕಟ ಪೂರ್ವ ಸಭಾಪತಿ ರೊ. ಕಿಶನ್ ಬಿ.ವಿ ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷ ರೋ. ವಿನೀತ್ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಿವಿಧ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಸಂಘಸೇವಾ ವಿಭಾಗದಲ್ಲಿ ನಾಲ್ವರು ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ವೃತ್ತಿ ಸೇವಾ ವಿಭಾಗದಡಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಅಬ್ರಹಾಂ ಎಸ್. ಎ. ಅವರನ್ನು ಗೌರವಿಸಲಾಯಿತು. ಸಮಾಜ ಸೇವಾ ವಿಭಾಗದಲ್ಲಿ ಅಂಗವಿಕಲ ಫಲಾನುಭವಿಗೆ ಉಚಿತ ವೀಲ್‌ಚೇರ್ ವಿತರಿಸಲಾಯಿತು ಹಾಗೂ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಗೆ ಆರ್ಥಿಕ ನೆರವು ನೀಡಲಾಯಿತು. ಅಂತರಾಷ್ಟ್ರೀಯ ಸೇವಾ ವಿಭಾಗದಲ್ಲಿ ರೋಟರಿ ಫೌಂಡೇಶನ್‌ನಿಂದ ಪಾಲ್ ಹ್ಯಾರಿಸ್ ಫೆಲೋ (PHF) ಗೌರವ ಪಡೆದ ರೊ. ಶ್ರೀಧರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ರೋ. ಸುಕನ್ಯಾ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ರೋ. ಶಶಿಧರ್ ಮಾವಿನಕಟ್ಟೆ ಹಾಗೂ ರೋ. ಗಣೇಶ್ ಕಲ್ಲರ್ಪೆ ಅವರು ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು