HEADLINES

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ರೋಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಪುತ್ತೂರು: ಜಿಡೆಕಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ರೋಟರಾಕ್ಟ್ ಕ್ಲಬ್ ಆಫ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರು (ರೋಟರಿ ಜಿಲ್ಲೆ 3181) ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಹಾಗೂ ಹೊಸ ಸದಸ್ಯರ ಪದಗ್ರಹಣ ಸಮಾರಂಭವು ಇಂದು (ಆಗಸ್ಟ್ 11) ನೆರವೇರಿತು.

ಕಾರ್ಯಕ್ರಮದ ಪದ ಪ್ರಧಾನ ಅಧಿಕಾರಿಯಾಗಿ ಆಗಮಿಸಿದ್ದ ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ರೊ. ಉಮೇಶ್ ಚಂದ್ರ ಡಿ.ವಿ. ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿಯ ಯೂತ್ ಸರ್ವಿಸ್ ಡೈರೆಕ್ಟರ್ ರೊ. ಪದ್ಮನಾಭ ಶೆಟ್ಟಿ ಅವರು ರೋಟರಾಕ್ಟ್ ಸಂಸ್ಥೆಯ ಸೇವಾ ಚಟುವಟಿಕೆಗಳ ಕುರಿತು ಮಾತನಾಡಿದರು.

ಅತಿಥಿಗಳಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ರೊ. ಸುಬ್ಬಪ್ಪ ಕೈಕಂಬ, ಸಹಾಯಕ ಜಿಲ್ಲಾ ಪ್ರತಿನಿಧಿ ರೋ. ನವೀನ್ ರೈ ಬನ್ನೂರು ಹಾಗೂ ಕೆನರಾ ವಲಯ ಪ್ರತಿನಿಧಿ ರೋ. ಎಡ್ವರ್ಡ್ ಪುತ್ತೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

ನೂತನ ಪದಾಧಿಕಾರಿಗಳು:
2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ. ಮೊಹಮ್ಮದ್ ರಿಜ್ವಾನ್ ಹಾಗೂ ಕಾರ್ಯದರ್ಶಿಯಾಗಿ ರೋ. ಶರಣ್ ಎಸ್ ರೈ ಅವರು ಅಧಿಕಾರ ವಹಿಸಿಕೊಂಡರು. ಸಂಸ್ಥೆಯ ಸಭಾಪತಿಯಾಗಿ ರೊ. ಧರ್ಣಪ್ಪ ಗೌಡ ಉಪಸ್ಥಿತರಿದ್ದು ಶುಭ ಹಾರೈಸಿದರು. ಹಾಗೆಯೇ ನಿವೃತ್ತ ಗ್ರಂಥ ಪಾಲಕರು ರೊ. ರಾಮಚಂದ್ರ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ರೋ. ಚಂದನ್, ನಿರ್ಗಮಿತ ಕಾರ್ಯದರ್ಶಿ ರೋ. ವೈಷ್ಣವಿ ಬಿ ಸಿ ಹಾಗೂ ನಿರ್ಗಮಿತ ಸಭಾಪತಿ ರೊ. ಗುರುರಾಜ್ ಕೆ ಅವರು ನೂತನ ತಂಡಕ್ಕೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು