HEADLINES

ಪ್ರಜ್ಞಾ ಆಶ್ರಮದಲ್ಲಿ ರೋಟ್ರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು: ರೋಟ್ರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಿರುಮಲೆ ಹಿಲ್‌ನಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ರೋ. ಶ್ರೀಕಾಂತ್ ಧ್ವಜಾರೋಹಣ ನೆರವೇರಿಸಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ವಲಯ ಪ್ರತಿನಿಧಿ ರೋ. ಎಡ್ವರ್ಡ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಪರಾಕ್ರಮ, ಧೈರ್ಯ ಮತ್ತು ತ್ಯಾಗಗಳನ್ನು ಸ್ಮರಿಸಿ, ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ರೋ. ನವೀನಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ರೋ. ಸುಶಾಂತ್ ವಂದಿಸಿದರು.

ಈ ಸಂದರ್ಭದಲ್ಲಿ ಸಹಾಯಕ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ರೋ. ನವೀನ್ ರೈ, ಐಪಿಪಿ ರೋ. ವಿನೀತ್, ರೋ. ಕಿಶೋರ್, ರೋ. ಆದಿತ್ಯ ಸೇರಿದಂತೆ ಪ್ರಜ್ಞಾ ಆಶ್ರಮದ ಮೇಲ್ವಿಚಾರಕರಾದ ಅಣ್ಣಪ್ಪ ಹಾಗೂ ಅವರ ಪತ್ನಿ ಮತ್ತು ಆಶ್ರಮದ ವಾಸಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಆಶ್ರಮದ ವಾಸಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು. ರೋಟ್ರಾಕ್ಟ್ ಕ್ಲಬ್ ಸದಸ್ಯರು ಆಶ್ರಮದ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು