HEADLINES

ಆಳ್ವಾಸ್ ಬೃಹತ್ ಉದ್ಯೋಗ ಮೇಳ: ಪುತ್ತೂರು ಅಭ್ಯರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

 ಪುತ್ತೂರು: ಆಳ್ವಾಸ್‌ನಲ್ಲಿ ಆಗಸ್ಟ್ 7ರಂದು (ಶುಕ್ರವಾರ) ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬಸ್ ಬೆಳಗ್ಗೆ 7:00 ಗಂಟೆಗೆ ಪುತ್ತೂರಿನ ಶಾಸಕರ ಕಚೇರಿಯಿಂದ ಹೊರಡಲಿದ್ದು, ಉದ್ಯೋಗ ಮೇಳ ಮುಗಿದ ಬಳಿಕ ಸಂಜೆ ಅಭ್ಯರ್ಥಿಗಳನ್ನು ಮರಳಿ ಪುತ್ತೂರಿಗೆ ಕರೆತರುವ ವ್ಯವಸ್ಥೆಯೂ ಮಾಡಲಾಗಿದೆ.

ಮಹಿಳಾ ಅಭ್ಯರ್ಥಿಗಳ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಪ್ರತಿ ಬಸ್‌ನಲ್ಲಿ ಒಬ್ಬ ಮಹಿಳಾ ಮಾರ್ಗದರ್ಶಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿಪಡಿಸಿರುವ Google Form ಅನ್ನು ಭರ್ತಿ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

Google form

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು