ಮಂಗಳೂರಿನ ಹೊರವಲಯದಲ್ಲಿ ನಡೆದ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಕುರಿತಂತೆ ಇದೀಗ ಪೋಲಿಸರು 8 ಜನರನ್ನು ಬಂಧಿಸಿದ್ದಾರೆ.
ಸುಹಾಸ್ ಶೆಟ್ಟಿಯನ್ನು ಸಫ್ವಾನ್ ಗ್ಯಾಂಗ್ ಹತ್ಯೆ ಮಾಡಿದೆ ಎಂಬುದು ಎನ್ನಲಾಗುತ್ತಿದೆ. ಸುಹಾಸ್ ಶೆಟ್ಟಿ ಕಾರಿಗೆ ಮೀನಿನ ಗಾಡಿಯನ್ನು ಡಿಕ್ಕಿ ಮಾಡಿಸಿ ಅಡ್ಡ ಗಟ್ಟಿ ತಲವಾರು ದಾಳಿ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಆಸ್ಪತ್ರೆಗೆ ಸೇರುವ ಮೊದಲೆ ಸಾವನ್ನಪ್ಪಿದ್ದರು.
ಈ ಘಟನೆಗೆ ಸಂಬಂಧಿಸಿ ಪೋಲಿಸರು ತಂಡ ರಚಿಸಿ ಈಗಾಗಲೆ ಶಂಕಿತ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಫ್ವಾನ್ ಗ್ಯಾಂಗ್ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದ್ದು ಇನ್ನಷ್ಟು ಸ್ಪಷ್ಟ ಕಾರಣ ಪೋಲಿಸ್ ತನಿಖೆಯಿಂದ ತಿಳಿದು ಬರಲಿದೆ.
0 ಕಾಮೆಂಟ್‌ಗಳು