Google Pixel 8 & 8 Pro Details: ಗೂಗಲ್‌ನ ಪಿಕ್ಸೆಲ್ ಸರಣಿ ಸ್ಮಾರ್ಟ್ಫೋನ್ ಗಳು ಕ್ಯಾಮೆರಾ ಮತ್ತು ತನ್ನ ಪರ್ಫಾಮೆನ್ಸ್ ಮೂಲಕ ಮಾರುಕಟ್ಟೆಯಲ್ಲಿ ಚಿರಪರಿಚಿತವಾಗತ್ತು. ಇಂತಹದೇ ಸಾಲಿಗೆ ಸೇರುವ ಗೂಗಲ್ ಪಿಕ್ಸೆಲ್ ತನ್ನ ಹೊಸ ಸರಣಿ ಪಿಕ್ಸೆಲ್ ೮ ನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಹುತೇಕ ಪಿಕ್ಸೆಲ್ 7 ನ್ನೇ ಹೋಲುವ ಪಿಕ್ಸೆಲ್ ೮ ಸರಣಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸ್‌ಪ್ಲೇ
ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್ ಫೋನ್ 6.17 ಇಂಚಿನ ಅಮೋಲೆಡ್ HDR10+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080*2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ 1400 Nits ಬ್ರೈಟ್ ನೆಸ್ ನ್ನು ಒಳಗೊಂಡಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ Victus 2ನ ರಕ್ಷಣೆಯೂ ಕೂಡ ಇದೆ.
ಕ್ಯಾಮೆರಾ
ಪಿಕ್ಸೆಲ್ 8 ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 12 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ 10.8 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
0 ಕಾಮೆಂಟ್‌ಗಳು