HEADLINES

NSUI ಬಂದು ನದಿಗೆ ಬಿದ್ದ ಮರವನ್ನು ತೆರವು ಗೊಳಿಸುವ ಕಾರ್ಯಕ್ಕೆ ಮುಂದಾದರು.

 ಮಾಡ್ನೂರು ಗ್ರಾಮ ಪೆಲಾರಿನಲ್ಲಿ ನದಿಗೆ ಮರವೊಂದು ಬಿದ್ದ ಘಟನೆ ನಡೆದಿದೆ.

ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಪೆಲಾರಿನಲ್ಲಿ ಮರವೊಂದು ನದಿಗೆ ಬಿದ್ದಿದ್ದು ಮರ ಬಿದ್ದ ಕಾರಣ ನದಿ ನೀರು ಹರಿಯುವಿಕೆಗೆ ತಡೆಯುಂಟಾಗಿ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗಿ ಪಕ್ಕದ ತೋಟಕ್ಕೆ ನುಗ್ಗುವ ಸಾಧ್ಯತೆ ಉಂಟಾಗಿದ್ದು, 






ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪುತ್ತೂರು ಎನ್ ಎಸ್ ಯು ಐ ಘಟಕದ ಅಧ್ಯಕ್ಷರು, ಸದಸ್ಯರು ಬಂದು ನದಿಗೆ ಬಿದ್ದ ಮರವನ್ನು ತೆರವು ಗೊಳಿಸುವ ಕಾರ್ಯಕ್ಕೆ ಮುಂದಾದರು.





ಮರವನ್ನು ನದಿಯಿಂದ ತೆರವುಗೊಳಿಸುವುದು ಈ ಕ್ಷಣಕ್ಕೆ ಸೂಕ್ತವಲ್ಲ ಎಂದುಕೊಂಡ ಎನ್ ಎಸ್ ಯು ಐ ಸದಸ್ಯರು ಇನ್ನೊಂದು ಬದಿಯಲ್ಲಿ ನೀರಿನ ರಭಸಕ್ಕೆ ತೇಲಿಬಂದ ಮರದಿಮ್ಮಿಯನ್ನು ಮೇಲೆತ್ತಲೂ ಪ್ರಯತ್ನ ಪಟ್ಟರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು