HEADLINES

ಮೊಬೈಲ್ ಗಾಗಿ ತಾಯಿ ಜೊತೆಗೆ ಮುನಿಸು ಬಾಲಕಿ ಆತ್ಮಹತ್ಯೆ

 

ಬೆಳ್ತಂಗಡಿಯಲ್ಲಿ ತಾಯಿ ಮೇಲೆ ಮುನಿಸಿಕೊಂಡು ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಗೈದ ಘಟನೆಯೊಂದು ನಡೆದಿದೆ‌.

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಜಾರ್ಖಂಡ್ ಮೂಲದ ಕುಟುಂಬದ  ನೀಲಮ್‌ ಕುಮಾರ್‌ ಎಂದು ತಿಳಿದು ಬಂದಿದೆ.

ಬೆಳ್ತಂಗಡಿಯ ಕರಾಯ ಎಂಬಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಕುಟುಂಬದ 14 ವರ್ಷ ಪ್ರಾಯದ ಬಾಲಕಿಗೆ ಸಂಬಂಧಿಕನೊಬ್ಬ ವೀಡಿಯೊ ಕರೆ ಮಾಡಿದ್ದಾನೆ, ಅದನ್ನು ವಿರೋಧಿಸ ತಾಯಿ ಬಾಲಕಿ ಕೈಯಲ್ಲಿದ್ದ ಮೊಬೈಲ್ ನ್ನು ಕಸಿದುಕೊಂಡಿದ್ದಾಳೆ.

ಈ ಕಾರಣಕ್ಕೆ ತಾಯಿ ಜೊತೆಗೆ ಮುನಿಸಿಕೊಂಡ ಬಾಲಕಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿರುತ್ತಾಳೆ ಎಂದು ತಂದೆ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು