ಕೊಡಿಯಾಲದ ಕಲ್ಪನೆಗೆ ಸರಿಯಾಗಿ ಬಸ್ಸು ಬಾರದೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಗೈರಾಗಿರುವ ಬಗ್ಗೆ ಕಲ್ಪನೆಯಿಂದ ವರದಿಯಾಗಿದೆ.
ಕಲ್ಪನೆಯಿಂದ ಶಾಲಾ ಕಾಲೇಜಿಗೆ ಹೋಗುವ ಸರಿ ಸುಮಾರು 42ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ಸನ್ನು ಅವಲಂಬಿಸಿದ್ದು ನಿನ್ನೆಯಿಂದ ಬಸ್ಸು ಬಾರದಿರುವ ಕಾರಣ ವಿದ್ಯಾರ್ಥಿಗಳು ತರಗತಿಗೆ ಗೈರಾಗುತ್ತಿದ್ದಾರೆ.
ಬೆಳ್ಳಾರೆಯಿಂದ ಕಲ್ಪನೆಗೆ ಸಂಚರಿಸದೆ ಪಂಜಿಗಾರು ತನಕ ಬಂದು ಚಾಲಕ, ನಿರ್ವಾಹಕರು ಹೋಟೆಲ್ ನಲ್ಲಿ ತಿಂಡಿ ಚಾ ಸವಿದು ಪಂಜಿಗಾರಿನಿಂದಲೆ ಬೆಳ್ಳಾರೆಗೆ ಬಸ್ ವಾಪಾಸ್ಸಾಗುತ್ತಿದ್ದಾರೆ. ಬೆಳ್ಳಾರೆಯಲ್ಲಿ ಟಿ.ಸಿ ಇಲ್ಲದಿದ್ದರೆ ಬೆಳ್ಳಾರೆಯಿಂದ ಕಲ್ಪನೆಗೆ ಬಸ್ಸು ಸಂಚರಿಸುವುದಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.
ಸಂಜೆ ವಿದ್ಯಾರ್ಥಿಗಳನ್ನು ಬೆಳ್ಳಾರೆಯಿಂದ ಕಲ್ಪನೆಗೆ ಹೊತ್ತೊಯ್ಯಬೇಕಾದ ಬಸ್ಸು ಬೆಳ್ಳಾರೆಯಲ್ಲಿ ಟಿ.ಸಿ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಚಾಲಕರು, ನಿರ್ವಾಹಕರು ಕಲ್ಪನೆ ಬೋರ್ಡಿಗೆ ಬಟ್ಟೆ ಮುಚ್ಚಿ ವಿದ್ಯಾರ್ಥಿಗಳ ಜೊತೆಗೆ ಕಳ್ಳಾಟ ಆಡುತ್ತಿದ್ದಾರೆ.
ವಿದ್ಯಾರ್ಥಿಗಳು ಈ ಬಗ್ಗೆ ಪ್ರಶ್ನೆ ಮಾಡಿದರೆ ನಾನ ಕಾರಣಗಳನ್ನು ನೀಡುತ್ತಾರೆಂದು ಶಾಲಾ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೆ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಇಂದು ಸಾರಿಗೆ ಸಚಿವರಿಗೆ ದೂರು ನೀಡಲು ಮುಂದಾಗಿದ್ದಾರೆ.
0 ಕಾಮೆಂಟ್‌ಗಳು