ಅಂಕತ್ತಡ್ಕದ ನಾಡೋಳಿ ಸೇತುವೆ ಬಳಿ ಜಾನಮೂಲೆ ಎಂಬಲ್ಲಿ ರಸ್ತೆಗೆ ಗುಡ್ಡಕುಸಿದು ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಜಾನಮೂಲೆ ಎಂಬಲ್ಲಿ ಹೊಸ ಸೇತುವೆ ನಿರ್ಮಾಣದ ವೇಳೆ ರಸ್ತೆ ಬದಿಯಲ್ಲಿನ ಗುಡ್ಡವನ್ನು ಅಗೆಯಲಾಗಿತ್ತು. ಇದೀಗ ಮಳೆ ಬರುವುದರಿಂದ ರಸ್ತೆಯ ಎರಡು ಬದಿಯಲ್ಲಿರುವ ಗುಡ್ಡ ಕುಸಿದು ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಸೇತುವೆ ನಿರ್ಮಾಣದ ವೇಳೆ ಸರಿಯಾದ ರೀತಿಯಲ್ಲಿ ರಸ್ತೆಬದಿಯಲ್ಲಿರುವ ಧರೆಯನ್ನು ಅಗೆಯುತ್ತಿದ್ದರೆ ಈಗ ಕುಸಿಯುತ್ತಿರಲಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
0 ಕಾಮೆಂಟ್‌ಗಳು