ಟೆಸ್ಟ್ ಕ್ರಿಕೆಟ್ ಗೆ ಕಿಂಗ್ ವಿದಾಯ

ಕ್ರಿಕೆಟ್ ಲೋಕದ "ಕಿಂಗ್" ಎಂದೇ ಹೆಸರಾದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ತನ್ನ 14 ವರ್ಷಗಳ ಟೆಸ್ಟ್ ಕ್ರಿಕೆಟ್ ಗೆ ಕೊನೆಗೂ ಕಿಂಗ್ ಪೂರ್ಣ ವಿರಾಮ ನೀಡಿದ್ದಾರೆ.

ವಿರಾಟ್ ಕೊಹ್ಲಿಯ ನಿರ್ಧಾರ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಕಳೆದ ಎರಡು ದಿನಗಳ ಹಿಂದೆಯೇ ಕಿಂಗ್ ನಿವೃತ್ತಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆಗಲೇ ಅಭಿಮಾನಿಗಳು "ನಿವೃತ್ತಿ ನೀಡಬೇಡಿ ಕಿಂಗ್, ನಿಮ್ಮ ಅವಶ್ಯಕತೆ ಕ್ರಿಕೆಟ್ ಲೋಕಕ್ಕೆ ಇನ್ನೂ ಬಹಳಷ್ಟು ಇದೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು