HEADLINES

ಡಿಕೆಶಿ ಗೆ ಒಲಿಯಲಿದೆ ಸಿಎಂ ಸ್ಥಾನ, ರಾಜೀನಾಮೆ ಕೊಡ್ತಾರ ಸಿದ್ದರಾಮಯ್ಯ..!

 ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಗಾಳಿ ಬೀಸುವ ಲಕ್ಷಣ ಕಾಣುತ್ತಿದೆ. 



ರಾಜ್ಯದಲ್ಲಿ ಗ್ಯಾರಂಟಿ ಕಾರ್ಡಿನ ಮೂಲಕ ಕಾಂಗ್ರೇಸ್ ಅಧಿಕಾರಕ್ಕೇರಿದ್ದು ಇದೀಗ 5 ವರ್ಷಗಳನ್ನು ಸರಕಾರ ಪೂರೈಸುವುದು ಗ್ಯಾರಂಟಿ ಇಲ್ಲದಂತಾಗಿದೆ.

ಸಚಿವ ಸಂಪುಟ ಸಹಿತ KPCC ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್  ಮುಂದಾಗಿದೆ ಎಂಬ ರಾಜಕೀಯ ವಿಶ್ಲೇಷಣೆಯೊಂದು ತಿಳಿದುಬಂದಿದೆ.


ಮುಡಾ ಹಗರಣದಲ್ಲಿ ವಿರೋಧ ಪಕ್ಷಗಳು ಹೋರಾಟ ನಡೆಯುತ್ತಿದೆ, ಈ ಬಗ್ಗೆ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿದೆ, ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ ಎನ್ನಲಾಗುತ್ತಿದೆ.


ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬೆಂಬಲ ನೀಡಿದ್ದು, ವಿರೋಧ ಪಕ್ಷದ ವಿರುದ್ದ ಹೋರಾಟಕ್ಕೆ ನಿರ್ಧರಿಸಿದೆ. ಇದರ ನಡುವೆ ಸಿಎಂ  ಬದಲಾವಣೆ ಮಾಡುವುದಾರೆ ಮುಂದಿನ ಸಿಎಂ ಆಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.



ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಕುರಿತು ಮಾತುಕತೆ ನಡೆಯಿತು ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಸ್ಥಾನ ತುಂಬಲ ಯಾರು ಅರ್ಹರು ಎಂಬ ಪ್ರಶ್ನೆ ಹೈಕಮಾಂಡ್ ಮುಂದಿದೆ. ಇದರ ಜೊತೆಗೆ ಸಚಿವ ಸಂಪುಟದ ನಾಲ್ಕೈದು ಸಚಿವರನ್ನು ಕೈ ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಂತು ಇಂತು ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಗೆ 5 ವರ್ಷ ಪೂರೈಸುವ ಗ್ಯಾರಂಟಿ ಇಲ್ಲದಾಗುತ್ತಾ,ಕಾದು ನೋಡಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು