ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಲಭ್ಯವಾಗಿದೆ. ಈ ಮೂಲಕ ಭಾರತದ ಪದಕಗಳ ಪಟ್ಟಿ 6 ಕ್ಕೆ ಏರಿಕೆಯಾಗಿದೆ.
57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಅಮಾನ್ ಸೆಹ್ರಾವತ್ ಗೆ ಕಂಚಿನ ಪದಕ ಲಭಿಸಿದೆ.ಫೋಟೋ ರಿಕೋದ ಡೇರಿಯನ್ ಟಾಯ್ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದ ಅಮನ್ ಸೆಹ್ರಾವತ್ ಈ ವರ್ಷ ಭಾರತದ ಪರ ಸ್ಪರ್ಧಿಸಿದ ಏಕೈಕ ಪುರುಷ ಕುಸ್ತಿಪಟು ಒಲಿಂಪಿಕ್ ಕ್ರೀಡಾ ಕೂಟದಲ್ಲಿ ತನ್ನ ಮೊದಲ ಪ್ರದರ್ಶನದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಅಮಾನ್ ಸೆಹ್ರಾವತ್ ಅವರು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ 7ನೇ ಕುಸ್ತಿಪಟುವಾಗಿದ್ದರೆ.
0 ಕಾಮೆಂಟ್‌ಗಳು