HEADLINES

ಮುಸ್ಲಿಂ ಯುವಕನ ಜೊತೆ ವಿವಾಹವಾದ ಹಿಂದೂ ಯುವತಿ

ಮಂಗಳೂರು: ಹಿಂದೂ ಯುವತಿಯೋರ್ವಳು ಅನ್ಯಕೋಮಿನ ಯುವಕನ ಜೊತೆ ತೆರಳಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೊಸ ತಿರುವೊಂದು ದೊರಕಿದೆ.

ಕ್ರಿಮಿನಲ್ ಹಿನ್ನಲೆಯುಳ್ಳ ಕೇರಳ ಮೂಲದ ಅಶ್ಫಾಕ್ ಎಂಬಾತ ಕೇರಳದ ಕಾಸರಗೋಡು ವಿದ್ಯಾನಗರ ನಿವಾಸಿಯ ಯುವತಿಯ ಜೊತೆ ಪರಿಚಯ ಬೆಳೆಸಿಕೊಂಡಿದ್ದ. ಕೆಲ ಸಮಯದ ನಂತರ ಹುಡುಗಿ ಮನೆಯವರಿಗೂ ಹೇಳದೆ ಆತನ ಜೊತೆ ಹೋಗಿದ್ದಳು


ಈ ಕುರಿತು ಯುವತಿಯ ತಂದೆ ವಿನೋದ್ ಅವರು ಠಾಣೆ ಮೆಟ್ಟಿಲೇರಿದ್ದರು. ನಂತರ ಮಗಳನ್ನು ವಾಪಸ್ ತರುವಂತೆ ಹಿಂದೂ ಸಂಘಟನೆಯ ಮುಖಂಡರ ಬಳಿ ಮನವಿ ಕೂಡ ಮಾಡಿದ್ದರು.

ಯುವತಿಯ ಮೈಂಡ್ ವಾಶ್ ಮಾಡಿ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿ ವಿವಾಹವಾಗಿರುವುದಾಗಿ ಸಂಘಟನೆ ಆರೋಪ ಮಾಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು