ಪುತ್ತೂರು:- ಪುತ್ತೂರಿನ ಸರಕಾರಿ ಕಾಲೇಜಿನ ಅನ್ಯಕೋಮಿನ ಯುವತಿಗೆ ಹಿಂದೂ ಯುವಕ ಬ್ರೇಡ್ ನಿಂದ ಇರಿದ ಪ್ರಕರಣ. ಗಾಯಗೊಂಡ ವಿದ್ಯಾರ್ಥಿನಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯಾರ್ಥಿನಿಗೆ ಅದೇ ಕಾಲೇಜಿನ ವಿದ್ಯಾರ್ಥಿ ಬ್ಲೇಡ್ ನಿಂದ ಇರಿದಿದ್ದಾನೆ. ಇದಕ್ಕೆ ಕಾರಣ ಏನೆಂಬುದು ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ. ಪುತ್ತೂರಿನಲ್ಲಿ ಹಾಡುಹಗಲೆ ಅದರಲ್ಲೂ ವಿದ್ಯಾರ್ಥಿಗಳೆ ಈ ರೀತಿ ಮಾಡುತ್ತಿರುವುದು ಬಹಳ ಖೇದಕರ ಸಂಗಾತಿ.
ಎನ್ ಎಸ್ ಯೂ ಐ ಇದನ್ನು ಖಂಡಿಸುತ್ತದೆ, ಪೋಲಿಸ್ ಇಲಾಖೆ ಈ ಬಗ್ಗೆ ಕೂಡಲೆ ಕ್ರಮ ಕೈಗೊಂಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ತಕ್ಷಣ ತನಿಖೆ ನಡೆಸಬೇಕು. ಮತ್ತೆ ಇಂತಹ ಘಟನೆ ಪುತ್ತೂರಿನಲ್ಲಿ ಮರುಕಳಿಸ ಬಾರದು. ಘಟನೆ ಸಂಬಂಧಿಸಿ ಎನ್ ಎಸ್ ಯೂ ಐ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾಣಿಸಿದ್ದೆವು ಆದರೆ ಪೋಲಿಸ್ ಇಲಾಖೆಯಿಂದ ನಮಗೆ ಭರವಸೆ ಸಿಕ್ಕಿದೆ, ಹಾಗಾಗಿ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವುದಿಲ್ಲ ಎಂದು ಪುತ್ತೂರು ತಾಲೂಕು ಎನ್ ಎಸ್ ಯೂ ಐ ಅಧ್ಯಕ್ಷ ಎಡ್ವಾರ್ಡ್ ಡಿಸೋಜಾ ತಿಳಿಸಿದ್ದಾರೆ.
0 ಕಾಮೆಂಟ್‌ಗಳು