HEADLINES

ಪುತ್ತೂರಿನಲ್ಲಿ ವಿದ್ಯಾರ್ಥಿನಿಗೆ ಚೂರಿ ಇರಿತ, ಕಾರಣ ಏನು ಗೊತ್ತಾ..!


ಪುತ್ತೂರಿನ ಸರಕಾರಿ ಕಾಲೇಜಿನ ಪ್ರಥಮ ಪಿಯುಸಿಯ ಅಪ್ರಾಪ್ತ‌ ಮುಸ್ಲಿಂ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿಯೊಬ್ಬ ಬ್ಲೇಡ್ ನಿಂದ ಇರಿದು ಗಾಯಗೊಳಿಸಿರುವ ಘಟನೆ ನಡೆದಿದೆ.


ಘಟನೆ ಇಂದು ಬೆಳಗ್ಗೆ ಅ. 20 ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಾಗನಕಟ್ಟೆಯ ಸೇತುವೆ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.

 ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಐಷತ್ ಇರ್ಫಾನಾ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಇವಳಿಗೆ ಶ್ರೀಜಿತ್ ಎಂಬ ವಿದ್ಯಾರ್ಥಿ ಬ್ಲೇಡ್ ನಿಂದ ಇರಿದ ಆರೋಪಿ ಶ್ರೀಜಿತ್ ಕೂಡ ಅದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.

ನಿನ್ನನ್ನು ಲವ್ ಮಾಡುತ್ತೇನೆ ಎಂದು ಹೇಳಿದ್ದ ಶ ಆ ಸಂದರ್ಭದಲ್ಲಿ ಇರ್ಫಾನಾ‌ ಆರೋಪಿಗೆ‌ ಅವನಿಗೆ ನಿಂದಿಸಿದ್ದಾಳೆ.

ಇದೆ ಕಾರಣಕ್ಕೆ ಸಿಟ್ಟಿಗೆದ್ದ ಶ್ರೀಜಿತ್  ಇರ್ಫಾನಾ ಕೈಗೆ ಬ್ಲೇಡ್ ನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಾರೆ ಎಂದು ವಿದ್ಯಾರ್ಥಿನಿ ‌ಆರೋಪಿಸಿದ್ದು, ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಈ ಎಲ್ಲಾ ಆರೋಪಗಳಿಗೆ ಪೋಲಿಸ್ ತನಿಖೆಯಿಂದಷ್ಟೆ ಸತ್ಯಾಂಶ ತಿಳಿಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು