ಪುತ್ತೂರು ತಾಲೂಕಿನ ಬಜರಂಗ ದಳ ಘಟಕದ ಸುರಕ್ಷಾ ಪ್ರಮುಖ್ ಸಚಿನ್ 27 ವರ್ಷ ಪ್ರಾಯದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರರಾಗಿದ್ದ ಸಚಿನ್ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು.
ಅನೇಕ ಜನಪರ ಕೆಲಸಗಳನ್ನು ಮಾಡಿ ಯುವ ಜನರಿಗೆ ಬಹಳ ಪ್ರಿಯರಾಗಿದ್ದರು, ಇಂದು ಅ. 20 ರಂದು ಮದ್ಯಾಹ್ನ ಗೇರು ಮರಕ್ಕೆ ಕೇಸರಿ ಶಾಲು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
0 ಕಾಮೆಂಟ್‌ಗಳು