HEADLINES

ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದಿಂದ ರಕ್ಷಾ ಬಂಧನ ಕಾರ್ಯಕ್ರಮ


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಸುಳ್ಯ ನಗರದಲ್ಲಿ ವಿದ್ಯಾರ್ಥಿ ಪರಿಷತ್ ನ ಸದಸ್ಯರು ಸುಳ್ಯ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಿದರು. ಶ್ರೀಗಣೇಶ್ ಪ್ರಿಂಟರ್ಸ್ ಮಾಲೀಕರಿಗೆ ಮತ್ತು ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಲಾಯಿತು.


ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಕುಲದೀಪ್ ಸರ್  ಉಪಾಧ್ಯಕ್ಷರಾದ ಪದ್ಮಕುಮಾರ್ ಸರ್ ಸುಳ್ಯ ತಾಲೂಕ್ ಸಂಚಾಲಕರಾದ ನಂದನ್ ಐವರ್ನಾಡು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು