HEADLINES

ಸಿನಿಮಾವನ್ನು ಮೀರಿಸುವ ಕಥೆಯಿದು


ಅವನು ಲವ್ ಮಾಡು ಅಂದಾಗ ಅವಳು ನಿರಾಕರಿಸಿದ್ಳಂತೆ, ಅವನ ಮಾತನ್ನು ನಿಂಧಿಸಿದ್ಳಂತೆ, ಇಷ್ಟೆ ಆಗಿದ್ದು ಕಣ್ರೀ.. ಅವನು ಅವಳ ಕೈಗೆ ಚೂರಿಯಿಂದ ಇರಿದೆ ಬಿಟ್ಟ ನೋಡಿ. " ಇದು ಯಾವುದೋ ಒಂದು ಸಿನಿಮಾ ಕಥೆ ಅಂದುಕೊಂಡರೆ ತಪ್ಪಗಲಾರದು, ಯಾಕೆಂದರೆ ಇಂತಹ ಕಥೆಯನ್ನು ಹೋಲುವ ಅನೇಕ ಸಿನಿಮಾಗಳು ಬಂದಿದೆ.  ಅದೆಲ್ಲವೂ ಕೇವಲ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರೆ ರಿಯಲ್ ಆಗಿ ಕಣ್ಣಿಗೆ ಕಾಣುವಂತಹ ಸಿನಿಮಾ ಶೈಲಿಯ ಘಟನೆಯೊಂದು ದ.ಕ ಜಿಲ್ಲೆಯಲ್ಲಿ ನಡೆದಿದೆ.

ಅಂದು ಅಗಸ್ಟ್ 20 ಮಂಗಳವಾರ ಮಟ ಮಟ ಮದ್ಯಾಹ್ನದ ಸಮಯ, ಇನ್ನೇನೂ ಜನರೆಲ್ಲ ಊಟ ಮಾಡಿ ತೇಗಿ ಕುಳಿತುಕೊಳ್ಳುವ ಸಮಯದಲ್ಲಿ ದ.ಕ ಜಿಲ್ಲೆಯ ಪುತ್ತೂರು ತಾಲೂಕು ಬೆಚ್ಚಿ ಬೀಳುವಂತೆ ಮಾಡಿತು ಇದೊಂದು ಘಟನೆ. ಊಟ ಬಿಟ್ಟು ಎಲ್ಲರೂ ಕಣ್ಣು ಹಾಯಿಸಿದ್ದು ಟಿವಿ, ಸಾಮಾಜಿಕ ಜಾಲತಾಣದತ್ತ. ಅದಾಗಲೆ ಎಲ್ಲರ ಬಾಯಲ್ಲಿ "ಪುತ್ತೂರುಡು ಕಾಲೇಜಿ ಪೊಣ್ಣಗ್ ಒರಿ ಚೂರಿ ಪಾಡ್ಯೆಗೆ". ಇದೊಂದೆ ಮಾತು. ನಿಮಿಷಗಳು ಕಳೆಯುತ್ತಿದ್ದಂತೆ " ಅವ್ ಚೂರಿ ಅತ್ತ್ ಗೆ... ಬ್ಲೇಡ್ ಗೆ ಮಾರಾಯ್ರೇ". ಈ ರೀತಿಯ ವರದಿಗಳು ಬಿತ್ತರವಾಗುತ್ತಿದ್ದಂತೆ ಕೆಲವು ಮಾದ್ಯಮಗಳಲ್ಲಿ ಗ್ಲಾಸ್ ಚುಚ್ಚಿದೆ ಎಂದು ವರದಿಗಳು ಪ್ರಸಾರಗೊಂಡವು. ಇಷ್ಟು ಮಾತ್ರವಲ್ಲ ಗಾಯಗೊಂಡ ವಿದ್ಯಾರ್ಥಿನಿಯ ವೀಡಿಯೊಗಳು ಸಹ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ಆಗಿವೆ.

ನಿಜ, ಈ ಘಟನೆಯನ್ನು ಎಲ್ಲರು ಖಂಡಿಸಲೇ ಬೇಕು ಹಾಗೂ ಖಂಡಿಸುತ್ತಾರೆ. ಆದರೆ ಇಲ್ಲಿ ನಡೆದದ್ದೆ ಬೇರೆ, ಸುದ್ದಿ ಹರಡಿದ್ದೆ ಬೇರೆ, ಇದನ್ನು ನಂಬಿದ ಕೆಲವು ಜನರನ್ನು ಹೇಳೊದೆ ಬೇಡ ಬಿಡಿ ಬಾಯಿಗೆ ಬಂದದ್ದೆ ಪಂಚಾಮೃತ ಅಂದುಕೊಂಡು ನಾಲಗೆ ಹರಿಬಿಟ್ಟು ಇಡೀ ದ.ಕ ಜಿಲ್ಲೆಯೇ ಬೆಚ್ಚಿ ಬೇಳುವಂತೆ ಮಾಡಿಬಿಟ್ಟರು.

ಹಾಗದರೆ ಅಲ್ಲಿ  ಆಗಿದ್ದೇನು ಗೊತ್ತೆ..! 

ಪುತ್ತೂರಿನ ಸರಕಾರಿ ಕಾಲೇಜೊಂದರ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಐಷತ್ ಇರ್ಫಾನಾ ಎಂಬವಳಿಗೆ ಅದೇ ಕಾಲೇಜಿನ ಶ್ರೀಜಿತ್ ಎಂಬ ವಿದ್ಯಾರ್ಥಿ ಚೂರಿಯಿಂದ ಇರಿದಿದ್ದಾನೆ ಎಂಬ ಸುದ್ದಿಯೊಂದು ಹರಿದಾಡಿತ್ತು. 

ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಲೇ ಆಸ್ಪತ್ರೆಯ ಮುಂಭಾಗ ಎನ್.ಎಸ್.ಯೂ. ಐ ನ ಕಾರ್ಯಕರ್ತರು, ಕಾಂಗ್ರೇಸ್ ಮತ್ತು ಎಸ್. ಡಿ. ಪಿ. ಐ ನ ಕೆಲವು ಮುಖಂಡರುಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಯಾರಿಗೂ ಯಾವುದೇ ತೊಂದರೆಗಳಾಗದಂತೆ ಪೋಲಿಸ್ ಇಲಾಖೆ  ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರನ್ನು ಆಸ್ಪತ್ರೆಯ ಮುಂಭಾಗ ನಿಯೋಜನೆಗೊಳಿಸಿತು. ಘಟನೆ ಕುರಿತಂತೆ ರಾಜಕೀಯ ವ್ಯಕ್ತಿಗಳು ಮಾದ್ಯಮಗಳಿಗೆ ಹೇಳಿಕೆ ಮೇಲೆ ಹೇಳಿಕೆ ನೀಡಿದರು. ಇಂತಹ ಘಟನೆಯನ್ನು ನಾವು ಖಂಡಿಸುತ್ತೇವೆ ಕೂಡಲೆ ಪೋಲಿಸರು ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು, ಕೆಲವು ರಾಜಕೀಯ ಸಂಘಟನೆಗಳು  ಪ್ರತಿಭಟನೆ ಮಾಡುವುದಾಗಿಯೂ ಹೇಳಿದ್ದ ಪಿಸುಗುಸು ಮಾತುಗಳು ಸಹ ಮಾದ್ಯಮಗಳ ಕ್ಯಾಮರ ಕಣ್ಣಿಗೆ ಸೆರೆಸಿಕ್ಕಿವೆ.

ಘಟನೆ ಕುರಿತಂತೆ ಅವರಿವರೆಲ್ಲ ಹೇಳಿಕೆಯನ್ನು ತಾಳ್ಮೆಯಿಂದ ಗಮನಿಸಿದ ಪೋಲಿಸರು ಗಾಯಗೊಂಡ ವಿದ್ಯಾರ್ಥಿನಿಯ ಹೇಳಿಕೆ ಪಡೆದುಕೊಂಡಿದ್ದಾರೆ, ವಿದ್ಯಾರ್ಥಿನಿಯ ನಿಮಿಷಕ್ಕೊಂದು ಹೇಳಿಕೆಯಲ್ಲಿ ಪೋಲಿಸರು ಬಹಳ ನಾಜೂಕಾಗಿ ಗಮನಿಸಿದ್ದಾರೆ. ವಶಕ್ಕೆ ಪಡೆದ ವಿದ್ಯಾರ್ಥಿಯನ್ನು ಸಹ  ತನಿಖೆಗೊಳಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ವಿದ್ಯಾರ್ಥಿನಿಗೆ ಚೂರಿ ಇರಿದಿರುವ ಸ್ಥಳದ ಆಸುಪಾಸಿನಲ್ಲಿದ್ದ ಸಿಸಿ ಕ್ಯಾಮರವನ್ನು ಸಹ ತನಿಖೆಗೆ ಬಳಸಿಕೊಂಡಿದ್ದಾರೆ. ಇದರಿಂದಲೆ ನೋಡಿ ಕಥೆಗೆ ರೋಚಕ ಟ್ವಿಸ್ಟ್ ಸಿಕ್ಕಿದ್ದು.

ಅತ್ತ ಸಿನಿಮಾನು ಅಲ್ಲ ಇತ್ತ ಡ್ರಾಮಾನು ಅಲ್ಲ ಕಣ್ರೀ ಇದು, ಯಾಕೆಂದರೆ ವಿದ್ಯಾರ್ಥಿನಿಗೆ ಶ್ರೀಜಿತ್ ಎಂಬ ವಿದ್ಯಾರ್ಥಿ ಚೂರಿಯಿಂದ ಇರಿದಿಲ್ಲವೆಂಬ ಸತ್ಯಾಂಶ ಪೋಲಿಸ್ ತನಿಖೆಯಿಂದ ತಿಳಿದುಬಂದಿದ್ದು, ಈಗಾಗಲೇ ವಶದಲ್ಲಿ ವಿದ್ಯಾರ್ಥಿಯನ್ನು ಬಿಡುಗಡೆಗೊಳಿಸಿದ್ದಾರೆ.  ಬಾಂಗ್ಲಾ ಮಾದರಿಯಲ್ಲೆ ಕರ್ನಾಟಕದಲ್ಲೂ ಹೋರಾಟ ಮಾಡುವುದಾಗಿ ಹೇಳಿ 24 ಗಂಟೆ ಆಗುವುದರೊಳಗೆ ಪುತ್ತೂರಿನಲ್ಲಿಂದು ಚೂರಿ ಇರಿತದ ಕಥೆ ಸೃಷ್ಟಿಯಾಗಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದೆ.  ಮೂಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು ಸಿಎಂ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡಿತ್ತಿದೆ ಈ ಎಲ್ಲಾ ವಿಚಾರವನ್ನು ಜನರ ತಲೆಯಿಂದ ಕಿತ್ತೆಸೆಯಲು ಪುತ್ತೂರಿನಲ್ಲಿ ಈ ರೀತಿಯ ಕಥೆ ಸೃಷ್ಟಿಸಲಾಯಿತೆ, ಅಥವಾ ಇಂತಹ ಕಥೆಗಳನ್ನು ತಾವೆ ಸೃಷ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಪ್ಲಾನ್ ರೂಪಿಸಿದ್ರಾ ಮುಖಂಡರುಗಳು ಎಂಬುದು ತಿಳಿಯಬೇಕಿದೆ.

ಅಂತು ಇಂತು ಕೂಡಲೆ ಬಂಧಿಸಿ ಎಂದು ಪೋಲಿಸರಿಗೆ ಮನವಿ ಮಾಡಿದ್ದು ಈಗಾಗಲೆ ಪೋಲಿಸರು ಸುಳ್ಳು ಕಥೆ ಕಟ್ಟಿದವರನ್ನು ಬಂಧಿಸುವುದಕ್ಕೆ ತಯಾರಾಗಿದ್ದಾರೆ. ಅದಕ್ಕೆ ಹೇಳೊದು ಕಣ್ಣಾರೆ ಕಂಡರು ಪರಂಬರಿಸಿ ನೋಡು ಎಂದು. ನಟಿಸಿದವಳು ಯಾರೆಂಬುದು ಕಂಡಿದ್ದೇವೆ, ಈ ಕಥೆಯನ್ನು ಬರೆದು  ನಿರ್ದೇಶಿಸಿದವರು ಯಾರೆಂಬುದು ಪೋಲಿಸ್ ತನಿಖೆಯಿಂದಷ್ಟೆ ಗೊತ್ತಾಗಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು