HEADLINES

ಅನ್ಯಕೋಮಿನ ವಿದ್ಯಾರ್ಥಿನಿಗೆ ಚೂರಿ ಪ್ರಕರಣ: ಹಿಂದೂ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಹಿಂದೂ ಪಯರ್ ಬ್ರಾಂಡ್ ಪುತ್ತಿಲ


ಪುತ್ತೂರಿನಲ್ಲಿ ವಿದ್ಯಾರ್ಥಿನಿಗೆ ಚೂರಿ ಇರಿತ ಕಥೆ  ಅ. 20 ರಂದು ಸೃಷ್ಟಿಯಾಗಿದ್ದು ಕೆಲ ಹೊತ್ತು ಪುತ್ತೂರಿನಲ್ಲಿ ಪಕ್ಷುಬ್ದ ವಾತವರಣ ನಿರ್ಮಾಣವಾಗಿತ್ತು.

ಪುತ್ತೂರಿನ ಸರಕಾರಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಹಿಂದು ವಿದ್ಯಾರ್ಥಿಯೊಬ್ಬ ಚೂರಿ ಇರಿದಿದ್ದಾನೆಂಬ ಸುದ್ದಿ ಹಬ್ಬಿತ್ತು. ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿತ್ತು.

ಕೂಡಲೆ ತನಿಖೆ ಕೈಗೆತ್ತಿಕೊಂಡ ಪೋಲಿಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದರು. 

ಸಂಜೆಯಾಗುತ್ತಲೆ ಪೋಲಿಸ್ ತನಿಖೆಯಿಂದ ಸತ್ಯಾಂಶ ಹೊರಬಂದಿದ್ದು ವಿದ್ಯಾರ್ಥಿನಿ ಕಟ್ಟು ಕಥೆ ಸೃಷ್ಟಿ ಮಾಡಿದ್ದಾಳೆಂದು ಎಂದು ತಿಳಿದು ಬಂದಿದೆ. ಇದೀಗ ವಿದ್ಯಾರ್ಥಿಯ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ದೈರ್ಯ ತುಂಬಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು