ಭಾರತವು ತನ್ನ ನಿಕಟ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಅದು ನಮ್ಮ ಪ್ರಮುಖ ಪಾಲುದಾರ ದೇಶವಾಗಿದ್ದು ನಮಗೆ ಅಗತ್ಯವಿರುವಾಗ ಸಹಾಯ ಮಾಡುವಲ್ಲಿ ಮುಂದಾಳತ್ವ ವಹಿಸುತ್ತದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಹೇಳಿದ್ದಾರೆ.
ಈ ಹಿಂದೆ ಭಾರತದ ಕುರಿತು ಉರಿಶಿಬೀಳುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಇದೀಗ ಯು-ಟರ್ನ್ ಹೊಡೆದಿದ್ದು ಈ ಬಾರಿ ಅವರು ಭಾರತದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ.
ಮಾಲ್ಡೀವ್ಸ್ ನ 28 ದ್ವೀಪಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸೃಷ್ಟಿಗೆ ಭಾರತ ಕೊಡುಗೆ ನೀಡಿದೆ. ಇದಕ್ಕಾಗಿ ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ ಸಬ್ಸಿಡಿ ಬಡ್ಡಿಯೊಂದಿಗೆ ಸಾಲ ನೀಡಿದೆ. ಈ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಯಿಜ್ಜು ಮಾತನಾಡಿದರು
0 ಕಾಮೆಂಟ್‌ಗಳು