ಕೆಯ್ಯೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಸವಣೂರು ವಲಯ ಪಟ್ಟದ ಚೆಸ್ ಪಂದ್ಯಾಟ ನಡೆಯಿತು. ಕಾರ್ಯಕ್ರಮವನ್ನು ಶಾಲೆಯ ಕಾರ್ಯಧ್ಯಕ್ಷರಾದ ಎ.ಕೆ ಜಯರಾಮ ರೈ ರವರು ಉದ್ಘಾಟಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೆಯ್ಯೂರು ಕಾಲೇಜಿನ ಪ್ರಾಂಶುಪಾಲರಾದ ಇಸ್ಮಾಯಿಲ್, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಎಸ್ ಭಂಡಾರಿ, ಮೀನಾಕ್ಷಿ, ಕೆಯ್ಯೂರು ಸಿ ಆರ್ ಪಿ ಶಶಿಕಲಾ, ನೋಡೆಲ್ ಶಿಕ್ಷಕರಾದ ಬಾಲಕೃಷ್ಣ, ಪುತ್ತೂರು ತಾಲೂಕು ಪ್ರಾಥಮಿಕ ಸಂಘದ ಪ್ರಧಾನ ಕಾರ್ಯದರ್ಶಿ ನವಿನ್ ಕುಮಾರ್ ರೈ, ಕೆ ಪಿ ಎಸ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ವಿನೋದ್ ಕುಮಾರ್, ಕೆಯ್ಯೂರು ಕೆ. ಪಿ. ಎಸ್ ಸ್ಕೂಲ್ ನ ಮುಖ್ಯೋಪಾಧ್ಯಾರಾದ ಬಾಬು, ಪೋಷಕರು, ಹಾಗೂ ಸವಣೂರು ವಲಯದ ಚೆಸ್ ಸ್ಪರ್ಧೆಗೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕರು, ಉಪಸ್ಥಿತರಿದ್ದರು. ರಮೇಶ್ ಕೋಟೆ ದ.ಕ ಜಿಲ್ಲಾ ಚೆಸ್ ಅಸೋಸೇಷನ್ ಅಧ್ಯಕ್ಷರು, ಹಾಗೂ ಮಹೇಶ್ ಕೋಟೆ ಪಂಜ, ಕೆಯ್ಯೂರು ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಮತಿ ಇಂದಿರಾ ರವರು ಸಹಕರಿಸಿದರು.
0 ಕಾಮೆಂಟ್‌ಗಳು