ಬಡ್ತಿ ಮತ್ತು ವರ್ಗಾವಣೆಗಾಗಿ ಆಗ್ರಹಿಸಿ ಇಂದು ಬೆಂಗಳೂರು ಚಲೋ ಮೂಲಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಪ್ರತಿಭಟನೆ ನಡೆಸಲಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಬೆಕೆಂದು ಇಂದು ರಾಜ್ಯಾದ್ಯಾಂತ ಶಾಲಾ ಶಿಕ್ಷಕರು ಬೆಂಗಳೂರಿಗೆ ತೆರಳಿ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
1ರಿಂದ 5 ನೇ ತರಗತಿ ವರೆಗೆ ಪಾಠ ಮಾಡುತ್ತಿರುವ ಶಿಕ್ಷಕರು ಪದವಿಧರರಾಗಿದ್ದ ಅವರನ್ನು 7-8 ನೇ ತರಗತಿಗೆ ಪಾಠ ಮಾಡುವ ಜಿಪಿಟಿ ಶಿಕ್ಷಕಕರು ಹುದ್ದೆಗೆ ಬಡ್ತಿ ನೀಡಬೇಕು, ಈ ಬಡ್ತಿಗೆ ಅಡ್ಡಿಯಾಗಿರುವ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ-2007ಕ್ಕೆ ತಿದ್ದುಪಡಿ ತರಬೇಕು, ಸೇವಾ ಜೇಷ್ಠತೆ, ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಅನ್ಯಾಯ ಸೇರಿದಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೆ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
0 ಕಾಮೆಂಟ್‌ಗಳು