HEADLINES

ಸುಬ್ರಾಯ ಕಲ್ಪನೆ ಯವರ ಧ್ವನಿಯಲ್ಲಿ ಮತ್ತೊಂದು ಹಾಡು "ಜನ ಸೇವಕ"


ಖಾಕಿ ಧರಿಸಿ ತನ್ನ ಕುಟುಂಬ, ತನ್ನ ಖುಷಿ ಎಲ್ಲವನ್ನು ತ್ಯಾಗ ಮಾಡಿ ನಮಗಾಗಿ ಹಗಲಿರುಳು ಪೋಲಿಸ್ ಎನ್ನುವ ಕಾವಲುಗಾರಾಗಿ ಬೀದಿ ಪಾಲಾಗುವ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿರುವ ಸುಬ್ರಾಯ ಕಲ್ಪನೆ ಯವರ ಹೊಸ ಹಾಡು ಬಿಡುಗಡೆ‌. 

ಅದೆಷ್ಟೋ ಆರಕ್ಷಕರು ನಿಯತ್ತಾಗಿ ಶಿಸ್ತಿನ ಸಿಪಾಯಿಗಳಾಗಿ ಜನ ಸೇವಕರಾಗಿ ನಮಗೆ ಬೆಳಕಾಗುವುದರ ಜೊತೆಗೆ ಬಿಡುವಿನ ವೇಳೆಯಲ್ಲಿ ನಮ್ಮನ್ನು ಮನರಂಜಿಸುವ ಕಲಾ ಸೇವಕರೂ ಇದ್ದಾರೆ.

ಇಂತಹ ಕಲಾವಿದರ  ಸಾಲಿನಲ್ಲಿ ಆರಕ್ಷಕ ಉನ್ನತ ಹುದ್ದೆಯಲ್ಲಿರುವ ಸುಬ್ರಾಯ ಕಲ್ಪನೆ ಅವರು ಕೂಡ ಒಬ್ಬರು. ವೃತ್ತಿಯಲ್ಲಿ ಇವರು ಪೋಲಿಸ್ ಠಾಣೆಯೊಂದರ ಉಪನಿರೀಕ್ಷಕರಾಗಿ ಕರ್ತವ್ಯದಲ್ಲಿದ್ದು, ಇವರೊಬ್ಬ ಅಧ್ಭುತ ಹಾಡುಗಾರಾಗಿ ಅದೆಷ್ಟೊ ವೇದಿಯಲ್ಲಿ ಹಾಡಿ ಪ್ರೇಕ್ಷಕರ ಮನ ರಂಜಿಸಿದ ಕಲಾವಿದ. ಇವರು ಹಾಡಿರುವ ಹಾಡುಗಳು  ಯೂಟ್ಯೂಬ್ ಜಾಲತಾಣದಲ್ಲೂ ತನ್ನ ಝಲಕ್ ಪಡೆದುಕೊಂಡಿದೆ.

ಇದೇ ಬರುವ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15ನೇ ತಾರೀಕಿನಂದು ಇವರು ಸಾಹಿತ್ಯ ರಚಿಸಿ ಹಾಡಿರುವ "ಜನ ಸೇವಕ" ಎಂಬ ಅಧ್ಭುತವಾದ ಒಂದು ಕನ್ನಡ ಹಾಡು ರಕ್ಷಕ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಲಿದೆ. ಸಂಗೀತ ಪ್ರಿಯರು ಆಲಿಸಲೇ ಬೇಕಾದ ಅತ್ಯದ್ಭುತ ಸಾಹಿತ್ಯದ ಇಂಪಾದ ಧ್ವನಿಯೊಂದಿಗೆ "ಜನ ಸೇವಕ" ಹೊಸ ಹಾಡನ್ನು ಕೇಳಿ ಆನಂದಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು