ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಮೇ. 1 ರ ರಾತ್ರಿ ಸುಮಾರು ಎಂಟು ಗಂಟೆ ಸುಮಾರಿಗೆ ಐದಾರು ಜನರ ತಂಡವೊಂದು ಸುಹಾಸ್ ಶೆಟ್ಟಿ ಕಾರನ್ನು ಅಡ್ಡಗಟ್ಟಿ ಮಂಗಳೂರಿನ ಕಿನ್ನಿಪದವು ಜಂಕ್ಷನ್ ನಲ್ಲಿ ತಲವಾರಿನಿಂದ ಮನಸೊ ಇಚ್ಚೆ ಹಲ್ಲೆ ನಡೆಸಿ ಕೊಲೆ ಮಾಡಿಲಾಗಿದೆ.
ಜನರ ಕಣ್ಣೇದುರೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಘಟನೆಯ ವೀಡಿಯೋವನ್ನು ಸಾಮಾಜಿಕ ಜಾಲಾತಣಗಳಲ್ಲಿ ಹರಿ ಬಿಟ್ಟು ಕೆಲವರು ಸಂಭ್ರಮಾಚರಣೆ ಮಾಡಿದ್ದಾರೆ. ಫಾಜೀಲ್ ಎಂಬಾತನ ಕೊಲೆ ಕೇಸಿನಲ್ಲಿ ಆರೋಪಿಯಾಗಿದ್ದ ಸುಹಾಸ್ ಇದೀಗ ಬರ್ಬರವಾಗಿ ಕೊಲೆಯಾಗಿದ್ದು ಇದು ಫಾಜೀಲ್ ಹತ್ಯೆಯ ಸೇಡು ಎಂದು ಹೇಳಲಾಗುತ್ತಿದೆ. ಇದೀಗ ಬೂದಿ ಮುಚ್ಚಿದ ಕೆಂಡಾದಂತಾದ ಮಂಗಳೂರಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪೋಲಿಸ್ ನಿಯೋಜನೆ ಮಾಡಲಾಗಿದೆ. ನಾಕ ಬಂದಿ ಹಾಕಲಾಗಿದೆ.
0 ಕಾಮೆಂಟ್‌ಗಳು