NSUI ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಎಡ್ವರ್ಡ್ ರಾಜೀನಾಮೆ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿದ್ದ ಎಡ್ವರ್ಡ್ ಡಿಸೋಜ ರವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.


ಅಧ್ಯಕ್ಷರಾಗಿ ಒಂದು ವರ್ಷದ ಅವಧಿ ಪೂರ್ಣಗೊಂಡ ಕಾರಣ ಅವರು ಇಂದು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ.

ತಮ್ಮ ಅವಧಿಯಲ್ಲಿ ವಿವಿಧ ವಿದ್ಯಾರ್ಥಿ ಪರ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಎಡ್ವರ್ಡ್ ರವರು ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಎದುರಿಸಲು, NSUI ತುರ್ತು ರಕ್ಷಣಾ ತಂಡವನ್ನು ರಚಿಸಿ ವಿವಿದೆಡೆ ದಿನ ರಾತ್ರಿ ಎನ್ನದೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 

ಅದೇ ರೀತಿ ತಮಗೆ ಯಾವುದೇ ವಿದ್ಯಾರ್ಥಿ ಕರೆ ಮಾಡಿ ಅಥವಾ ಭೇಟಿಯಾಗಿ ಸಮಸ್ಯೆ ಕುರಿತು ಹೇಳಿದರೆ ತಕ್ಷಣವೇ ಅದಕ್ಕೆ ಸ್ಪಂದಿಸಿದ್ದರು. ಹಾಗೆಯೇ ಗಾಳಿ ಮಳೆಗೆ ಕೌಡಿಚ್ಚಾರಿನಲ್ಲಿ ಎರಡು ಮನೆಗಳಿಗೆ ತೀವ್ರ ಹಾನಿ ಉಂಟಾದಾಗ ತಕ್ಷಣವೇ ಎಡ್ವರ್ಡ್ ಸೇರಿದಂತೆ NSUI ಕಾರ್ಯಕರ್ತರು ಭಾತೀಷ್ ಅಳಕೆಮಜಲು ರವರ ನೇತೃತ್ವದಲ್ಲಿ ಆ ಮನೆ ದುರಸ್ತಿಗೆ ನೆರವಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು