ಬಿಜೆಪಿಯಿಂದ ಪಾದ ಯಾತ್ರೆ ಹಮ್ಮಿಕೊಂಡಿದ್ದು, ಕಾಂಗ್ರೇಸ್ ನವರು ಠಕ್ಕರ್ ಕೊಡುವುದಕ್ಕಾಗಿ ಸಮಾವೇಶ ಕಾರ್ಯಕ್ರಮದ ಮೂಲಕ ರಾಜ್ಯ ರಾಜಕೀಯ
ಮತ್ತಷ್ಟು ಬಲ ಪಡಿಸಲು ಕಾಂಗ್ರೇಸ್ ನವರು ಕಸರತ್ತು ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲೆ ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದು ಪಾದಯಾತ್ರೆ ಮುಗಿಯುವ ವೇಳೆಗೆ ರಾಜ್ಯ ಸರಕಾರ ಪತನವಾಗಲಿದೆ ಎಂದಿದ್ದಾರೆ.
ಉಚಿತ ಘೋಷಣೆ ಮೂಲಕ ಜನರ ಮನೆ ಮನ ತಲುಪಿದ್ದ ಕಾಂಗ್ರೇಸ್ ಅಧಿಕಾರ ನಡೆಸಲು ಚಡಪಡಿಸುತ್ತಿದೆ. ಸರಕಾರದ ಖಜಾನೆ ಅಂದುಕೊಂಡ ಹಾಗೆ ಇಲ್ಲ, ಉಚಿತ ಯೋಜನೆಯಿಂದಾಗಿ ಸರಕಾರದಿಂದ ಅಭಿವೃದ್ದಿ ಕೆಲಸಗಳು ಕುಂಟಿತಗೊಂಡಿವೆ. ಇದನ್ನು ಸ್ವತಃ ಕಾಂಗ್ರೇಸ್ ನ ಶಾಸಕರುಗಳೆ ಹೇಳುತ್ತಿದ್ದಾರೆ.
ಇದೆಲ್ಲದರ ನಡುವೆ ಎಚ್ ಡಿ ಕುಮಾರ್ ಸ್ವಾಮಿಯವರ ಹೊಸ ಬಾಂಬ್ ಕಾಂಗ್ರೇಸ್ ನವರಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ ಅಂತಾನೆ ಹೇಳಬಹುದು.
ಅದೇನೆ ಇರಲಿ ಇತ್ತ ಬಿಜೆಪಿ ಪಾದಯಾತ್ರೆ ಮೂಲಕ ಜನರನ್ನು ತಲುಪಿದರೆ ಅತ್ತ ಕಾಂಗ್ರೇಸ್ ಸಮವೇಶದ ಮುಖೇನ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿಯವರ ಜ್ಯೋತಿಷ್ಯದ ಮಾತುಗಳು ನಿಜವಾಗುತ್ತಾ ಅಥವಾ ಸುಳ್ಳಾಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.
0 ಕಾಮೆಂಟ್‌ಗಳು