HEADLINES

ಭಾತೀಷ್ ನಾಮಪತ್ರ ತಿರಸ್ಕಾರಕ್ಕೆ ಎನ್ ಎಸ್ ಯೂ ಐ ತಾಲೂಕು ಅಧ್ಯಕ್ಷ ಎಡ್ವರ್ಡ್ ಡಿ ಸೋಜಾ ಬೇಸರ


ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ NSUI ನಾಯಕ ಬಾತೀಷ್ ಅಳಕೆಮಜಲು ಮತ್ತು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಶಿಕ್ ಸಂಪ್ಯ ರವರ ನಾಮಪತ್ರ ತಿರಸ್ಕೃತ ಗೊಂಡಿರುವುದು ತೀವ್ರ ಬೇಸರವಾಗಿದೆ. ನಾಮಪತ್ರ ತಿರಸ್ಕರಿಸಲು ಯುವ ಕಾಂಗ್ರೆಸ್ ಚುನಾವಣೆ ಸಮಿತಿ ಯಾವುದೇ ಕಾರಣ ನೀಡಿಲ್ಲ. ಇದು ಖಂಡಿತವಾಗಿಯೂ ದೊಡ್ಡ ಷಡ್ಯಂತ್ರವಾಗಿದೆ. ಇದನ್ನು NSUI ಪುತ್ತೂರು ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ನಾಮಪತ್ರ ತಿರಸ್ಕರಿಸಲು ಕಾರಣ ಏನೆಂಬುದನ್ನು ಯುವ ಕಾಂಗ್ರೆಸ್ ಚುನಾವಣೆ ಸಮಿತಿ ತಿಳಿಸಬೇಕು. ಅನ್ಯಾಯ ಆಗಲು ಬಿಡುವುದೇ ಇಲ್ಲ.

 ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇಲ್ಲ, ನಿಷ್ಠಾವಂತ ಕಾರ್ಯಕರ್ತರು ಬ್ಯಾನರ್ ಹಿಡಿಯಲು ಮಾತ್ರ ಸೀಮಿತ ಎಂಬ ಮಾತುಗಳು ಇಂದು ನಿಜವಾಗಿವೆ. ಕಾರಣ ನೀಡದೇ ನಾಮಪತ್ರ ತಿರಸ್ಕಾರಗೊಂಡಿರುವುದರ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ.

ಇದರ ಬಗ್ಗೆ ನೇರ ಹೋರಾಟ ಮಾಡುತ್ತೇವೆ. ಬಾತೀಷ್ ರವರ ಜೊತೆ ನಾವೆಲ್ಲರೂ ಇದ್ದೇವೆ. ಮುಂದೆ ಪಂಚಾಯತ್, ನಗರಸಭೆ ಸೇರಿದಂತೆ ವಿವಿಧ ಚುನಾವಣೆ ಬಂದಾಗ ನಮಗೂ ಸರಿಯಾದ ಸಮಯ ಒದಗಿ ಬರುತ್ತದೆ, ಆಗ ಇವತ್ತು ಆಗಿರುವ ಅನ್ಯಾಯಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ. 

*ಸಮಾಜದಲ್ಲಿ ಬಡವರ, ನಿರ್ಗತಿಕರ ಏಳಿಗೆಗಾಗಿ ಮತ್ತು ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕಾಗಿ ಉತ್ತಮವಾಗಿ ಶ್ರಮಿಸುತ್ತಿರುವ ಯುವಕರನ್ನು ಸೈಲೆಂಟ್ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷದ ನಾಯಕರೇ, ನಿಮಗೆ ನನ್ನ ನೇರ ಎಚ್ಚರಿಕೆ ನೀಡುತ್ತಿದ್ದೇನೆ. ಮುಂದೆ ಚುನಾವಣೆಗಳು ಬರಲಿ. ಆಗ ತಕ್ಕ ಉತ್ತರ ನೀಡುತ್ತೇವೆ.* 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು