ಗೃಹೋಪಯೋಗಿ ಮಳಿಗೆಯೊಂದರ ಮ್ಯಾನೇಜರ್‌ಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೆಕ್ಯುರಿಟಿ ಗಾರ್ಡ್‌ನ್ನು ಬಂಧಿಸಿರುವ ಬಗ್ಗೆ ಉಡುಪಿ ನಗರದಿಂದ ವರದಿಯಾಗಿದೆ.
ಉಡುಪಿಯ ಹರ್ಷ ಗೃಹಪಯೋಗಿ ಮಳಿಗೆಯ ಮ್ಯಾನೇಜರ್ ಗೆ ಚೂರಿ ಇರಿತವಾಗಿದ್ದು, ಅಲ್ಲಿನ ಸೆಕ್ಯುರಿಟಿ ಗಾರ್ಡ್ ನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ.
ಆಗೋಸ್ಟ್ 9ರಂದು ಕೆಲಸಕ್ಕೆ ಬಂದಿದ್ದ ಪ್ರಸಾದ್ ಮಧ್ಯಾಹ್ನದವರೆಗೆ ಮಾತ್ರ ಕೆಲಸ ಮಾಡಿ ಹೋಗಿದ್ದನು. ಈ ಕುರಿತು ಸೆಕ್ಯೂಟಿರಿ ಗಾರ್ಡ್ ಕಂಪನಿಯ ಮ್ಯಾನೇಜರ್‌ಗೆ ತಿಳಿಸಲಾಗಿತ್ತು. ಆ.10ರಂದು ಪ್ರಸಾದ್ ಕೆಲಸಕ್ಕೆ ಹಾಜರಿದ್ದು, ಸಂಜೆ ವೇಳೆ ರೋನ್ಸನ್ ಡಿಸೋಜ ಅವರನ್ನು ಪ್ರಸಾದ್ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಶೋರೂಂಗೆ ಬರಲು ತಿಳಿಸಿದ್ದನು.
0 ಕಾಮೆಂಟ್‌ಗಳು