HEADLINES

ರೋಟರಿ ಮತ್ತು ರೋಟ್ರಾಕ್ಟ್ ಕ್ಲಬ್ ಪುತ್ತೂರು ಇದರ ವತಿಯಿಂದ ಅಂಗನವಾಡಿ ಮಕ್ಕಳಿಗೆ ಪಾದುಕೆ ವಿತರಣೆ.

ಪುತ್ತೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ದಿ ಯೋಜನೆ ಪುತ್ತೂರು, ಬಪ್ಪಳಿಗೆ ಇಲ್ಲಿ ಪೋಷಣ್ ಅಭಿಯಾಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಮತ್ತು ರೋಟ್ರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಅಂಗನವಾಡಿ ಪುಟಾಣಿಗಳಿಗೆ ಪಾದುಕೆ ವಿತರಿಸಿದರು. ಪಾದುಕೆ ಕೊಡುಗೈ ದಾನಿಗಳಾದ ರೊ. ರಫೀಕ್ ಕೋಶಾಧಿಕಾರಿ ರೋಟರಿ ಕ್ಲಬ್ ಪುತ್ತೂರು ಪುಟಾಣಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರೋಟ್ರಾಕ್ಟ್ ಕ್ಲಬ್ ನ ಅಧ್ಯಕ್ಷರು, ಸದಸ್ಯರುಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿಗಳು, ಪೋಷಕರು, ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು