ಸಾರ್ವಜನಿಕ ಸ್ಥಳದಲ್ಲೆ ಯುವಕನಿಗೆ ಚೂರಿ ಇರಿತವಾಗ ಘಟನೆ ಕಬಕ ಸಮೀಪದ ಉರಿಮಜಲಿನಲ್ಲಿ ನಡೆದಿದೆ.
ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬಾತನಿಗೆ ಆಫೀ ಎಂಬಾತ ಚೂರಿ ಇರಿದಿದ್ದಾನೆ. ಉರಿಮಜಲು ಆಸುಪಾಸಿನಲ್ಲಿ ಅಮಲು ವ್ಯಸನಿಗಳ ಕಾಟ ಹೆಚ್ಚಾಗಿದ್ದು ಗಲ್ಲಿಗಲ್ಲಿಗಳಲ್ಲಿ ಗಾಂಜಾ ವ್ಯಸನಿಗಳಿರುವುದು ಖಚಿತವಾಗುತ್ತಿದೆ. ಕೂಡಲೆ ಪೋಲಿಸ್ ಇಲಾಖೆ ಕಾರ್ಯಚರಣೆ ನಡೆಸಿ ಇಂತಹ ಅಮಲು ವ್ಯಸನಿಗಳನ್ನು ಹಿಡಿದು ಬೆಂಡೆತ್ತಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಘಟನೆ ನಡೆಯಲು ಅಮಲು ಪದಾರ್ಥವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
0 ಕಾಮೆಂಟ್‌ಗಳು