ಆಗೋಮ್ಮೆ ಈಗೊಮ್ಮೆ ಆಡುವ ಮಾತುಗಳು, ನಡುವೆ ಪದೆ ಪದೆ ನಸುನಗು ಜೊತೆಗೆ ಮನಸಿನೊಳಗೆ ಏನೋ ಒಂಥರ ಕಲ್ಪನೆ. ಸಂಗಾತಿಯ ಯೋಚನೆಗಳೆನೋ ಪ್ರಿಯತಮನ ಪ್ರೀತಿಯ ನಾಟಕವೇನೊ ಅಂತು ಇಂತು ಇಬ್ಬರನ್ನು ನೋಡಿ ಈ ಜಗವೆ ನಾಚುವಂತಿರಬೇಕು ಅಷ್ಟೆ. ಇದು ಪ್ರೀತಿ ಎಂಬ ಮಾಯೆಯಲ್ಲಿ ಆಡಿಸಿ ನೋಡುವ ನಾಟಕ ರಂಗ. ಇಲ್ಲಿ ಯಾವುದು ನಿಜ, ಯಟವುದು ಸುಳ್ಳು ಅಳೆಯಲು ಅಸಾಧ್ಯ ಯಾಕೆಂದರೆ ಪ್ರೀತಿ ಅನ್ನೋ ಎರಡಕ್ಷರ ಯಾರನ್ನು ಹೇಗೂ ಬೇಕಾದರೂ ಮಾಡಬಹುದು.
ಅಟ್ಟವನ್ನೇರಿಸಿದ ಪ್ರೀತಿ ಪ್ರೇಮ, ಸದ್ದಿಲ್ಲದೆ ಪ್ರೇಮಿಗಳನ್ನು ಚಟ್ಟವನ್ನು ಏರಿಸಿದ ಉದಾಹರಣೆಗಳು ತುಂಬಾನೆ ಕೂಡ ಇದೆ. ಜಾತಿಗೆ ಜಾತಿ ಅಡ್ಡ ಬಂದರೆ, ಕೆಲವೊಮ್ಮೆ ಕಾರಣಗಳನ್ನೆ ಸೃಷ್ಟಿಸಿ ಫಾಗಲ್ ಪ್ರೇಮಿಗಳನ್ನು ದೂರ ಮಾಡಿದ ನಿದರ್ಶನಗಳು ಸಹ ಬೇಕಾದಷ್ಟು ಸಿಗಬಹುದು. ಹಣ, ಉದ್ಯೋಗ, ಅಂದ- ಚೆಂದಗಳಿಗೆ ಸೋಲುವ ಹೃದಯಗಳು, ಕಣ್ಣಿಲ್ಲದ ಕುರುಡನ, ಬಾಯಿ ಬಾರದ ಮೂಕನಿಗೂ ಹೃದಯ ತುಂಬಿದ ಪ್ರೀತಿಯೊಂದಿಗೆ ಸಂಸಾರವೆಂಬ ನೌಕೆ ದಾಡಿದವರು ಇದ್ದಾರೆ.
ಈ ಜಗತ್ತು ಇಷ್ಟೆ ಕಣ್ರೀ, ಹೀಗೆ ಕಣ್ರೀ ಅನ್ನೋದಕ್ಕಿಂತ ನಾನು ಯಾಕೆ ಹೀಗಾದೆ ಅನ್ನೋದನ್ನು ಯೋಚಿಸುವ ಹೃದಯಗಳು ಅತ್ಯಂತ ಕಡಿಮೆ. ಸೋಲುವ ಮೊದಲು ನಾವು ಹೆಜ್ಜೆ ಇಡುವುದು ಹೋರಾಟಕ್ಕಾಗಿ ಅಥವಾ ಸ್ಪರ್ಧೆಗಾಗಿ. ಗೆದ್ದರೆ ನೂರೆಂಟು ಸನ್ಮಾನಗಳು, ಗೌರವಗಳು ಧಕ್ಕುತ್ತದೆ. ಸೋತರೆ ಬೆನ್ನು ತಟ್ಟಿ ಸಂತೈಸುವ ಕೈಗಳು ಬರುವುದು ತೀರ ಕಡಿಮೆ. ಹಾಗಂತ ಸೋಲು ಎಂಬುದನ್ನು ಕೀಳಾಗಿ ಕಾಣಬಾರದು ಒಂದೊಮ್ಮೆ ಸೋಲು ಸಹ ಅನೇಕ ಅನುಭವ ಪಾಠಗಳನ್ನು ಕೊಟ್ಟು ಈ ಸಲ ನೀನು ಪಾಸ್ ಅನ್ನುವ ಮಟ್ಟಕ್ಕೂ ತಂದು ನಿಲ್ಲಿಸಬಹುದು.
ಸಾಗರದಂತಿದ್ದ ಪ್ರೀತಿಯಲ್ಲಿ ಸಾಗಬೇಕೆಂದರೆ ಸಾವಿರ ಸಲ ಯೋಚಿಸಿ ನೋಡಿ, ಹೃದಯವಂತಿಕೆ ಸಾಗರದಂತಿದ್ದರೆ ಪ್ರೀತಿ ನದಿಯಂತೆ ಹರಿದು ಸಾಗರವನ್ನು ಸೇರಬಹುದು. ಪ್ರೇಮಿಗಳೆ ಸಾವಿರ ಸಲ ಯೋಚಿಸಿ, ಸಿಕ್ಕ ಸಮಯದಲ್ಲಿ ಪ್ರೀತಿ, ಉಯ್ಯಾಲೆಯಲ್ಲಿ ಕುಳಿತುಕೊಳ್ಳುವ ಮೊದಲು ಅದರ ಆಧಾರ ಸ್ತಂಭವನ್ನು ಹೇಗೆ ಗಮನಿಸುತ್ತೇವೊ ಅದೇ ರೀತಿ ಪ್ರೀತಿಸುವ ಮೊದಲು ಗುಣ, ವ್ಯಕ್ತಿತ್ವವನ್ನು ತಿಳಿಯಿರಿ. ಶೋಕಿಗಾಗಿ ಆಸೆ ಪಡಬೇಡಿ, ಓಸಿಯಲ್ಲಿ ಸಮಯ ಕಳೆಯಬೇಡಿ.
✍️ ಹರೀಶ್ ಪುತ್ತೂರು
0 ಕಾಮೆಂಟ್‌ಗಳು