HEADLINES

ಶಿರೂರು ಮಣ್ಣಿನಡಿ ಸಿಲುಕಿದ್ದ ಅರ್ಜುನ್ ಲಾರಿಯ ಅವಶೇಷಗಳು ಪತ್ತೆ‌..!

ಭಾರಿ ಸುದ್ದಿ ಮಾಡಿದ್ದ ಶಿರೂರು ಗುಡ್ಡ ಕುಸಿತದ ಮಣ್ಣಿನಡಿಯಲ್ಲಿ ಅರ್ಜುನ್ ನ ಲಾರಿಯ ಅವಶೇಷಗಳು ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಭಾರಿ ಮಳೆಗೆ ಗುಡ್ಡವೊಂದು ಕುಸಿದು ದೊಡ್ಡ ದುರಂತವೆ ಆಗಿಹೋಗಿತ್ತು. 

ಈ ದುರಂತ ಘಟನೆಯಲ್ಲಿ ಕೆಲವು ಜೀವಗಳು ಬಲಿಯಾಗಿದ್ದವು, ಅದರಲ್ಲೂ ಕೇರಳ ಮೂಲದ ಅರ್ಜುನ್ ಎಂಬಾತ ಲಾರಿ ಸಮೇತ ಮಣ್ಣಿನಡಿ ಸಿಲುಕಿದ್ದರು.

ಕೂಡಲೆ ಕಾರ್ಯಚರಣೆ ನಡೆಸಲಾಯಿತಾದರೂ ಭಾರಿ ಮಳೆಗೆ ಅಡಚರಣೆ ಉಂಟಾಗುತ್ತಿತ್ತು. 

ಆದರೂ ಸಹ ಕಾರ್ಯಚರಣೆ ನಡೆಸಿ ಕೆಲವೊಂದು ಜೀವವನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿತ್ತು. ಆದರೆ ಅರ್ಜುನ್ ಮಾತ್ರ ಪತ್ತೆಯಾಗಿರಲಿಲ್ಲ. ಆತ ಲಾರಿಯೊಳಗೆ ಜೀವಂತವಾಗಿದ್ದಾನೆಂಬ ಸುದ್ದಿಯೂ ಹರಿದಾಡಿತ್ತು. ಅರ್ಜುನ್ ಬದುಕಿ ಬರಲೆಂದು ಇಡೀ ದೇಶವೆ ಪ್ರಾರ್ಥಿಸಿತು.

ಮುಳುಗುತಜ್ಞರು ಸೇರಿ ಕಾರ್ಯಚರಣೆಗೆ ಬೇಕಾದ ಎಲ್ಲ ತಂಡವನ್ನು ತರಿಸಿ ಅರ್ಜುನ್ ಪತ್ತೆಗಾಗಿ ಹರಸಾಹಸ ಪಡಲಾಯಿತು. ಆದರೆ ಅರ್ಜುನ್ ಪತ್ತೆಯಾಗಿರಲಿಲ್ಲ. ಇದೀಗ ಅರ್ಜುನ್ ಇದ್ದ ಲಾರಿಯ ಅವಶೇಷಗಳನ್ನು ಈಶ್ವರ್ ಮಲ್ಪೆ ಪತ್ತೆ ಹಚ್ಚಿದ್ದಾರೆಂದು ತಿಳಿದು ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು