HEADLINES

ಆಕೋರ್ಚಿ ಅಣ್ಣ ಬರ್ಥ್ ಡೆ ಎನ್ನ.. ಘಟನೆಯ ಆರೋಪಿಗಳು ಖುಲಾಸೆ


ಅಂದೊಂದು ಘಟನೆ ಇಡೀ ರಾಷ್ಟ್ರದ್ಯಾಂತ ಸದ್ದು ಮಾಡಿತ್ತು. ಸತತ 12 ವರ್ಷಗಳ ಬಳಿಕ ಘಟನೆಗೆ ಇಂದು ಅಂತಿಮ ಮುದ್ರೆ ಬಿದ್ದಿದೆ.

2009ರ ಪಬ್ ದಾಳಿ ನಂತರ 2012ರಲ್ಲಿ ದೊಡ್ಡ ಸುದ್ದಿಯಾಗಿದ್ದೆ ಮಂಗಳೂರಿನ ಹೋಂ ಸ್ಟೇ ದಾಳಿ. 2012ರಲ್ಲಿ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಮಹತ್ವದ ತೀರ್ಪನ್ನು ನ್ಯಾಯಾಲಯ ಆಗಸ್ಟ್ 6 (ಮಂಗಳವಾರ) ಪ್ರಕಟಿಸುವುದರೊಂದಿಗೆ ಕೊನೆಯ ಮುದ್ರೆ ಒತ್ತಿದಂತಾಗಿದೆ.

ಹುಟ್ಟುಹಬ್ಬ ಆಚರಿಸುತ್ತಿದ್ದ ಸಂಧರ್ಭದಲ್ಲಿ  ಈ ದಾಳಿ ನಡೆದಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಘಟನೆಯ ವಿವರ ಪಡೆದು ಪೋಲಿಸರು ತಪ್ಪಿತಸ್ಥರನ್ನು ಬಂಧಿಸಿದರು. ಒಟ್ಟು 44 ಆರೋಪಿಗಳನ್ನು ಕಂಬಿಯೊಳಗೆ ತಳ್ಳಿದ್ದು ಅವರಲ್ಲಿ ಮೂವರು ಸಾವನ್ನಪ್ಪಿದರು, ಇಂದು ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು.

ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿ,  ಎಲ್ಲಾ ಆರೋಪಿಗಳನ್ನು ಬಂಧನ ಮುಕ್ತ ಗೊಳಿಸಿದೆ. ಈ ಘಟನೆಗೆ ಸಂಬಂಧಿಸಿ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆದೇಶ ಹೊರಡಿಸಿದ್ದಾರೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು