ಸ್ಟೈಲಿಷ್ ದೃಶ್ಯಗಳು, ವಿಭಿನ್ನ ಪಾತ್ರ ಪರಿಚಯ ಮತ್ತು ಸಿನಿಮಾದ ವಾತಾವರಣವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವಿಡಿಯೋವನ್ನು ರೂಪಿಸಲಾಗಿದೆ. ಇದುವರೆಗೆ ಚಿತ್ರದ ಕಥೆ ಮತ್ತು ಪಾತ್ರಗಳ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗವಾಗಿರದ ಹಿನ್ನೆಲೆಯಲ್ಲಿ, ಈ ಹೊಸ ಅಪ್‌ಡೇಟ್ ಅಭಿಮಾನಿಗಳ ಗಮನ ಸೆಳೆದಿದೆ.
ವಿಡಿಯೋ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಚಿತ್ರದ ಕಲಾವಿದರ ಲುಕ್ ಹಾಗೂ ಪ್ರಸ್ತುತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಶ್ ಅವರ ಮುಂದಿನ ಚಿತ್ರವಾಗಿರುವ 'ಟಾಕ್ಸಿಕ್' ಕುರಿತು ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದ್ದು, ಈ ಹೊಸ ವಿಡಿಯೋ ಚಿತ್ರದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರವು ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
0 ಕಾಮೆಂಟ್‌ಗಳು