ಮಂಗಳೂರಿನಲ್ಲಿ ಪ್ರತಿಕಾರಕ್ಕಾಗಿ ಹರಿಯುತ್ತಿದೆಯಾ ರಕ್ತ..!

 ಒಂದು ಸಾವಿನ ಪ್ರತಿಕಾರಕ್ಕಾಗಿ ಮತ್ತೊಂದು ಸಾವು, ಆ ಸಾವಿನ ಪ್ರತಿಕಾರಕ್ಕಾಗಿ ಮತ್ತೊಂದು ಹೆಣ ಬೀಳುತ್ತದೆ. ಹಾಗಾದರೆ ಇಂತಹ ಘಟನೆಗಳಿಗೆ ಮುಕ್ತಿ ಏನು..?




ಮ್ಯಾರಥಾನ್ ರೀತಿ ಸಾಲು ಸಾಲು ಕೊಲೆಗಳಾಗುತ್ತಿವೆ, ಕರಾವಳಿ ಎಂದರೆ ಜನರಿಗೆ ನೆನಪಾಗುವುದು ಇಂತಹ ಘಟನೆಗಳು. ನಿನ್ನೆ ರಾತ್ರಿ ಮಂಗಳೂರಿನ ಹೊರವಲಯದಲ್ಲಿ ನಡೆದ ರಣ ಭೀಕರ ಘಟನೆಗೆ ಇದೀಗ ಇಡೀ ರಾಜ್ಯವೇ ಧಗಧಗ ಎನ್ನುತ್ತಿದೆ.


ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಫಾಜೀಲ್ ಎಂಬಾತನ ಕೊಲೆ ಮಾಡಲಾಗಿದೆ. ಇದೀಗ ನಿನ್ನೆ ರಾತ್ರಿ ಎಂಟು ಗಂಟೆಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.


ಬೆಳ್ಳಾರೆಯ ಕಟ್ಟೆ ಬಳಿಯಲ್ಲಿ ಸುಮಾರು ಎಂಟು ಗಂಟೆಗೆ ಪ್ರವೀಣ್ ನೆಟ್ಟರು ಕೊಲೆ ಮಾಡಿದರು. ನಿನ್ನೆ ಮಂಗಳೂರಿನಲ್ಲಿ ನಡೆದ ಘಟನೆ ಸಹ ಎಂಟು ಗಂಟೆ / ಒಂಬತ್ತು ಗಂಟೆಯ ಒಳಗೆ ನಡೆದಿರುವಂತಹದ್ದು. ಕೊಲೆಗಡುಕರು ರಾತ್ರಿ ಎಂಟು ಗಂಟೆ ಸಮಯವನ್ನೆ ಮೀಸಲಿಟ್ಟು ರಕ್ತ ಹರಿಸಲು ಮುಂದಾಗುತ್ತಿದ್ದಾರಾ..!


ಒಬ್ಬರ ಮೇಲೊಬ್ಬರು ಸೇಡು ತೀರಿಸಿಕೊಳ್ಳುವುದೇ ಇವರ ವೃತ್ತಿಯೆ? ಎಲ್ಲಿದೆ ಸರ್ವಧರ್ಮಿಯ ಭಾವನೆಗಳು? ಕರಾವಳಿಯಲ್ಲಿರುವ ಬಾಂಧವ್ಯ ಸಾಮರಸ್ಯ..! ಫಾಜೀಲ್ ಹತ್ಯೆಯ ಆರೋಪಿ ಎಂದು ಬಿಂಬಿಸುತ್ತಿರುವವರೆ ಇದೀಗ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದವರು ಸಹ ಕೊಲೆ ಆರೋಪಿಗಳಲ್ಲವೇ..? ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬರ್ಬರ ಘಟನೆಯನ್ನು ಸಂಭ್ರಮಿಸುತ್ತಿರುವ ಕ್ರಿಮಿಗಳು ನಮ್ಮ ಕರಾವಳಿಯಲ್ಲಿ ರಾಜರೋಷವಾಗಿ ಇದ್ದಾರೆ ಅಂತವರನ್ನು ಬಂಧಿಸುವುದು ಯಾವಾಗ?  


ರಕ್ತಸಿಕ್ತ ವಿಷಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೊತ ಕೊತ ಕುಡಿಯುತ್ತಿದೆ. ಬದುಕಿ ಬಾಳ ಬೇಕಾದವರೆ ಪ್ರತಿಕಾರದ ಜ್ವಾಲೆಗೆ ತುತ್ತಾಗಿ ಮಸಣ ಸೇರುತ್ತಿದ್ದಾರೆ, ನ್ಯಾಯದ ಪರವಾಗಿ ಬದುಕಿ ಬಾಳಿದರೆ ಅವ ರೌಡಿ ಶಿಟರ್, ಜೀವನ ಪರ್ಯಾಂತ ತಲವಾರು -ಚಾಕು ಹಿಡಿದರೆ ಅವ ದೇಶ ಪ್ರೇಮಿಯೆ..? ನ್ಯಾಯಕ್ಕೆ ಉತ್ತರಿಸಬೇಕಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು