ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಟೆರರ್ ಕ್ಯಾಂಪ್‌ಗಳ ಮೇಲೆ ಬುಧವಾರ ಬೆಳಗಿನ ಜಾವ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಭಾರತದಿಂದ ದಾಳಿ ಆಗಿರುವುದನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ. ಪಂಜಾಬ್ ಪ್ರಾಂತ್ಯದ ಬಹವಾಲ್ಪುರ್, ಮುರಿಡ್ಕೆ, ಪಾಕ್ ಆಕ್ರಮಿಯ ಕಾಶ್ಮೀರದ ಮುಜಫರಾಬಾದ್, ಕೋಟ್ಲಿ, ಬಾಗ್‌ನಲ್ಲಿ ದಾಳಿ ಆಗಿದೆ ಎಂದು ತಿಳಿಸಿದೆ.
ಜೊತೆಗೆ ಭಾರತ ಪಾಕ್ ಗಡಿಯುದ್ದಕ್ಕೂ ಭಾರೀ ಪ್ರಮಾಣದ ಶೆಲ್ ದಾಳಿ ಮತ್ತು ಗುಂಡಿನ ಚಕಮಕಿ ನಡೆದಿದೆ. ಇವೆಲ್ಲವೂ ಯುದ್ಧದ ಎಲ್ಲಾ ಸಾಧ್ಯತೆ ತೆರೆದಿರಿಸಿವೆ.
0 ಕಾಮೆಂಟ್‌ಗಳು