HEADLINES

ಬೆಂಗಳೂರಿನಲ್ಲಿ HMVP ವೈರಸ್ ಪತ್ತೆ: 2019 ರಲ್ಲಿ ಆದಂತಹ ಆತಂಕ ಮತ್ತೆ ಮರುಕಳಿಸುತ್ತಾ..!

 


ಚೀನಾದಿಂದ ಮತ್ತೊಂದು ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಕಳೆದ ಬಾರಿ 2019 ರಲ್ಲಿ ಭಾರತದಲ್ಲಿ ಅಟ್ಟಹಾಸ ಮೆರೆದು ಜೀವವನ್ನು ಬಲಿ ಪಡೆದ ಕೊರೋನಾ ವೈರಸ್ ಮೊದಲಿಗೆ ಹುಟ್ಟಿಕೊಂಡಿದ್ದೆ ಚೀನಾದಲ್ಲಿ. ನಂತರದ ದಿನಗಳಲ್ಲಿ ಇಡೀ ಪ್ರಪಂಚವನ್ನು ಆವರಿಸಿಕೊಂಡು ಎಲ್ಲರನ್ನು ಬಂಧನದಲ್ಲಿಟ್ಟಿತ್ತು.


ಇದೀಗ ಅಂತಹದ್ದೆ ಆತಂಕ ಸೃಷ್ಟಿಸುವ ಮಹಾಮಾರಿ ವೈರಸ್  ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ HMPV ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಮೊದಲ ಕೇಸ್‌ ಪತ್ತೆಯಾಗಿದ್ದು, ಕೊರೋನಾ ವೈರಸ್‌ ಗಿಂತಲೂ ವಿಭಿನ್ನವಾಗಿರುವ HMPV ವೈರಸ್ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.


ಬೆಂಗಳೂರಿನ 8 ತಿಂಗಳ ಮಗುವಿಗೆ HMPV ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು