ಹೌದು, ವಿನಯ್ ರಾಜ್‌ಕುಮಾರ್ ಸಿನಿಮಾ 'ಪೆಪೆ' ಟೀಸರ್ ಎರಡು ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಆ ಸಿನಿಮಾದ ಟೀಸರ್ ನೋಡಿ ಸಿನಿ ಪ್ರಿಯರ ಕಣ್ಣುಗಳು ಅರಳಿದ್ದವು. ಇಷ್ಟೊಂದು ಮಾಸ್, ರಗಡ್ ಕ್ಯಾರೆಕ್ಟರ್‌ನಲ್ಲಿ ವಿನಯ್ ರಾಜ್‌ಕುಮಾರ್ ಅನ್ನು ನೋಡಿ ಮಾತೇ ಹೊರಳಿರಲಿಲ್ಲ. 'ಪೆಪೆ' ಟೀಸರ್ ನೋಡಿ, ವಿನಯ್‌ಗೆ ಈ ಸಿನಿಮಾ ದೊಡ್ಡ ಬ್ರೇಕ್ ಕೊಡುತ್ತೆ ಅಂತಲೇ ಮಾತಾಡಿಕೊಂಡಿದ್ದಷ್ಟೇ ಬಂದಿತ್ತು.
ಇವತ್ತು (ಆಗಸ್ಟ್ 18) 'ಪೆಪೆ' ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಸ್ವತ: ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ. 'ಪೆಪೆ' ಟ್ರೈಲರ್ ಅನ್ನು ಕಿಚ್ಚ ಸುದೀಪ್ ಲಾಂಚ್ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ವಿನಯ್ ಈ ಸಿನಿಮಾದ ಶೋ ರೀಲ್ ಅನ್ನು ಕಿಚ್ಚ ಸುದೀಪ್ ತೋರಿಸಿದ್ದರು.
0 ಕಾಮೆಂಟ್‌ಗಳು