HEADLINES

ಮುಕ್ಕೂರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ,


ಸರಕಾರಿ ಪ್ರಾಥಮಿಕ ಶಾಲೆ ಮುಕ್ಕೂರು ಇಲ್ಲಿ  78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಆದ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಶಾಲೆಯ ಪೋಷಕರು, ವಿದ್ಯಾಭಿಮಾನಿಗಳು ಸೇರಿದಂತೆ ಊರಿನ ದಾನಿಗಳು ಪಾಲ್ಘೊಂಡಿದ್ದರು. 


ಈ ದಿನ ಶಾಲೆಗೆ ಸುನಿತಾ ಗಂಗಾಧರ ಕರಂಬೂತೋಡಿ ಇವರು ಶಾಲೆಗೆ 5 ಚಯರ್ ನ್ನು ಕೊಡುಗೆಯನ್ನಾಗಿ ನೀಡಿದರು. ಬಾಲವಿಕಾಸ ಅಧ್ಯಕ್ಷರಾದ ದಿವ್ಯ ಕಾನಾವು ಮತ್ತು ಪಂಚಾಯತ್ ಮೆಂಬರ್ ಗುಲಾಬಿ ಇವರು ದ್ವಜಾರೋಹಣ ಗೈದರು. ವಿಶೇಷವಾಗಿ ಸಮಾಜಕಲ್ಯಾಣ ಇಲಾಖೆ ಸುಳ್ಯ ಇವರು ಉಪಸ್ಥಿತರಿದ್ದರು.  ಮುಕ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ದಯಾಕರ ಆಳ್ವ ಕುಂಬ್ರ, ಮೋಹನ್ ಬೈಪಾಡಿತ್ತಾಯ, ಉಮೇಶ್ ಕೂರೋಡಿ, SDMC ಅಧ್ಯಕ್ಷರಾದ ಜಯಂತ್ ಕುಂಡಡ್ಕ ಹಾಗೂ ಪೋಷಕರು ಮತ್ತು ಊರ ದೇಶಭಿಮಾನಿಗಳು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ರೂಪ ಇವರು ಸ್ವಾಗತಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು