ಹೌದು, ಇದು ಯಾವುದೇ ಸಿನಿಮಾದಲ್ಲಾದ ಘಟನೆ ಅಲ್ಲ, ದ. ಕ ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ತಡ ರಾತ್ರಿ ಕೇಳಿ ಬಂದ ಸುದ್ದಿ.
ಪುತ್ತೂರು ಕಬಕದಿಂದ ಅನಾಮಿಕ ವ್ಯಕ್ತಿಯೊಬ್ಬ 112 ಗೆ ಕರೆ ಮಾಡಿ ಸರ್ ನನ್ನನ್ನು ಕಾರಿನಲ್ಲಿ ಕಿಡ್ನಾಪ್ ಮಾಡ್ತಿದ್ದಾರೆ, ನನ್ನನ್ನು ರಕ್ಷಿಸಿ ಎಂದು ಹೇಳಿಕೊಂಡಿದ್ದಾನೆ. ಕೂಡಲೆ ಈ ಸುದ್ದಿ ಪುತ್ತೂರು ನಗರ ಠಾಣೆಗೆ ಲಭಿಸಿದ್ದು ಪುತ್ತೂರು ನಗರ ಠಾಣೆಯಿಂದ ಸುಳ್ಯದಲ್ಲಿರುವ ಪೋಲಿಸ್ ಠಾಣೆಗೂ ಮಾಹಿತಿ ರವಾನಿಸಲಾಗಿದೆ.
ಪುತ್ತೂರು ನಗರ ಠಾಣೆ ಮತ್ತು ಸುಳ್ಯ ಪೋಲಿಸ್ ಠಾಣೆಯ ಪೋಲಿಸರು ಕಾರ್ಯಚರಣೆಗೆ ಮುಂದಾಗಿದ್ದು. ಸುಳ್ಯದ ಜಾಲ್ಸೂರಿನಲ್ಲಿ ಸುಳ್ಯ ಪೋಲಿಸರು ನಾಕ ಬಂದಿ ಹಾಕಿ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳ ಮೇಲೆ ನಿಗಾ ಇರಿಸಿದ್ದರು.
ರಾತ್ರಿ ಇಡೀ ನಾಕ ಬಂದಿ ಹಾಕಿ ವಾಹನಗಳ ತಪಾಷಣೆ ನಡೆಸಿದರು ವ್ಯಕ್ತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ನಡೆದಿಲ್ಲ. ಇತ್ತ ಪೋಲಿಸರಿಗೆ ಕರೆ ಮಾಡಿ ನನ್ನನ್ನು ರಕ್ಷಣೆ ಮಾಡಿ ಎಂದ ಅನಾಮಿಕ ಯಾರೆಂಬುದು ಪತ್ತೆಯಾಗಿಲ್ಲ. ಇದೀಗ ಈ ಕುರಿತು ತನಿಖೆ ಮುಂದುವರಿದಿದೆ.
0 ಕಾಮೆಂಟ್‌ಗಳು