HEADLINES

ಮನೆಗೆ ಬಿಡುವುದಾಗಿ ಹೇಳಿ ಬ್ರಿಡ್ಜ್ ಬಳಿ ಬಾಲಕಿ ಮೇಲೆ ಅತ್ಯಾಚಾರ

 

ಹುಬ್ಬಳ್ಳಿ:- ಕೊಲೆ ಬೆದರಿಕೆ ಹಾಕಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚರಕ್ಕೆ ಯತ್ನಿಸಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಆರೋಪಿಯನ್ನು ಅಬ್ಬಾಸ್ ಎಂಬಾತನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.


ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಅಬ್ಬಾಸ್, ಆಕೆಯನ್ನು ನಂಬಿಸಿ ಮನೆಗೆ ಬಿಡುವುದಾಗಿ ಹೇಳಿ ಕರೆದೊಯ್ದದಿದ್ದಾನೆ. ಮನೆಗೆ ಕರೆದುಕೊಂಡು ಹೋಗುವುದು ಕೇವಲ‌ ನೆಪ ಅಷ್ಟೆ ಈ ಕಾಮುಕ ರೇವಡಿಹಾಳ ಬ್ರಿಡ್ಜ್ ಬಳಿ ಬಾಲಕಿ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.


ಅಲ್ಲದೇ ಆಗಸ್ಟ್ 18ರಂದು ಬಾಲಕಿ ಮನೆ ಬಳಿ ಬಂದು ಗಲಾಟೆ ಮಾಡಿದ್ದ ಅಬ್ಬಾಸ್, ಬಾಲಕಿಯನ್ನು ಎಳೆದಾಡಿದ್ದಾನೆ. ಆ ದಿನ ಬಾಲಕಿಗೆ ಬೆದರಿಕೆ ಹಾಕಿದ ಕಾಮುಲ ಬಾಲಕಿಯನ್ನು ಬಿಟ್ಟುಕೊಡದಿದ್ದರೆ ನೇಹಾ ಹಿರೇಮಠಳಂತೆ ಹತ್ಯೆ ಮಾಡುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ಅಬ್ಬಾಸ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಆರೋಪಿ ಅಬ್ಬಾಸ್ ನನ್ನು ಪೊಲಿಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು