ಯುವ ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ NSUI ನಾಯಕ ಬಾತೀಷ್ ಅಳಕೆಮಜಲು ರವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಭಾರೀ ದೊಡ್ಡ ಷಡ್ಯಂತ್ರದ ಮೂಲಕ ಯಾವುದೇ ಕಾರಣ ನೀಡದೆ ಗೆಲ್ಲುವ ಅಭ್ಯಾರ್ಥಿಯ ನಾಮಪತ್ರವನ್ನೆ ತಿರಸ್ಕರಿಸಲಾಗಿದ್ದು ಇದಕ್ಕೆ ಎನ್ ಎಸ್ ಯೂ ಐ ನ ಪುತ್ತೂರು ತಾಲೂಕಿನ ಅಧ್ಯಕ್ಷರು ಭಾರಿ ಬೇಸರ ವ್ಯಕ್ತ ಪಡಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಿಗೆ ಕಾಂಗ್ರೇಸ್ ಪಕ್ಷದಲ್ಲಿ ಬೆಳೆಯಲು ಅವಕಾಶ ನೀಡುವುದಿಲ್ಲ ಎಂಬ ಮಾತು ಕೊನೆಗೂ ನಿಜವಾಗಿದೆ ಎಂದು ಅವರು ತಿಳಿಸಿದ್ದಾರೆ.
NSUI ಪುತ್ತೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಇದರ ಬಗ್ಗೆ ತೀವ್ರವಾಗಿ ಖೇದ ವ್ಯಕ್ತ ಪಡಿಸಿರುವುದಕ್ಕೆ ಈ ರೀತಿಯ ಅನ್ಯಾಯ ಪಕ್ಷಧ ಬೆಳವಣಿಗೆ ತೊಡಕು ಉಂಟು ಮಾಡುತ್ತದೆ. ಯುವಕರಿಗೆ ನಿರುತ್ಸಾಹ ಉಂಟಾಗುತ್ತದೆ ಎಂದು ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭ ವಾಗಿದೆ.
ನನ್ನ ನಾಮಪತ್ರ ತಿರಸ್ಕಾರ ವಾಗಿದೆ ಎಂದು ಮಾತ್ರ ಗೊತ್ತಾಗಿದೆ ಯಾವ ಕಾರಣಕ್ಕೆ ಎಂದು ತಿಳಿದು ಬಂದಿಲ್ಲವೆಂದು ಭಾತೀಷ್ ತಿಳಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಯ ಮೇಲೆ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ. ನನ್ನ ಗೆಲುವು ಖಚಿತ ವೆಂದು ಗೊತ್ತಾಗಿರುವ ಕಾರಣ ಈ ರೀತಿಯ ಪಿತೂರಿ ನಡೆಸಲಾಗಿದೆ ಇದರ ಹಿಂದಿರುವ ಕಾಣದ ಕೈಗಳು ಯಾರೆಂಬುದು ತಿಳಿಯಲೇಬೇಕಿದೆ. ಎಂದು ಭಾತೀಷ್ ಅಳಕೆಮಜಲು ಪ್ರತಿಕ್ರಿಯೆ ನೀಡಿದರು.
0 ಕಾಮೆಂಟ್‌ಗಳು