ರಕ್ಷಾಬಂಧನ ಅಂದ್ರೆ ಎಲ್ಲರಿಗೂ ನೆನಪಾಗೋದು ಅಣ್ಣ - ತಂಗಿಯ ಭಾಂದವ್ಯ. ಅಣ್ಣ - ತಂಗಿಯ ಪ್ರೀತಿ, ಮಮತೆ, ಅಕ್ಕರೆಯನ್ನು ಇಲ್ಲಿ ನಾವು ನೋಡಬಹುದು. ತಂಗಿ ಆದವಳು ಅಣ್ಣನಿಗೆ ರಕ್ಷೆಯನ್ನು ಕಟ್ಟಿ ನನ್ನನ್ನು ಕಡೆತನಕ ರಕ್ಷಣೆ ಮಾಡು ಎಂದು ಮನಸಾರೆ ಬಯಸುತ್ತಾಳೆ. ಅಣ್ಣನಾದವನು ತಂಗಿಯನ್ನು ರಕ್ಷಣೆ ಮಾಡುತ್ತೇನೆ ಎಂದು ಮಾತು ಕೊಡುತ್ತಾನೆ. ಆದರೆ ಈ ರಕ್ಷಾಬಂಧನ ಹಬ್ಬವನ್ನು ನಾವು ಯಾಕೆ ಆಚರಣೆ ಮಾಡುತ್ತೇವೆ? ರಕ್ಷಾಬಂಧನ ಹಬ್ಬದ ಆಚರಣೆಯ ಹಿಂದಿನ ಕಥೆಯೇನು?.. ಅನ್ನೋದು ಕೆಲವರಿಗೆ ತಿಳಿದಿಲ್ಲ. ರಕ್ಷಾಬಂಧನ ಹಬ್ಬದ ಆಚರಣೆಯ ಹಿಂದೆ ಪುರಾಣಗಳ ದೊಡ್ಡ ಇತಿಹಾಸವೇ ಇದೆ.
ಪುರಾಣಗಳ ಪ್ರಕಾರ ಮಹಾಭಾರತದ ಕಾಲದಲ್ಲಿ, ಶ್ರೀ ಕೃಷ್ಣನು ಗೋವುಗಳನ್ನ ಮೇಯಿಸುತ್ತಿರುವನು. ಆಗ ಇದ್ದಕ್ಕಿದ್ದಂತೆ ಕೃಷ್ಣನ ಬಲಕೈ ನಾಡಿಗೆ ಹಸುವಿನ ಕೋಡು ತಾಗಿ ರಕ್ತ ಬರೋಕೆ ಶುರುವಾಗುತ್ತೆ. ಆಗ ಅಲ್ಲೇ ಸ್ವಲ್ಪ ದೂರದಲ್ಲಿದ್ದ ದ್ರೌಪದಿಯು ಓಡೋಡಿ ಬಂದು, ಕೃಷ್ಣನ ಕೈಯಿಂದ ಸೋರುತ್ತಿರುವ ರಕ್ತವನ್ನ ನೋಡಿ, ತನ್ನ ಸೀರೆಯ ಸೆರಗನ್ನು ಹರಿದು ಗಾಯವಾದ ಭಾಗಕ್ಕೆ ಬಿಗಿಯಾಗಿ ಕಟ್ಟುತ್ತಾಳೆ. ಆಗ ಶ್ರೀ ಕೃಷ್ಣನು ತಾನು ಕಷ್ಟಕಾಲದಲ್ಲಿದ್ದಾಗ ತನಗೆ ಸಹಾಯ ಮಾಡಿದ ಡ್ರಾಪದಿಯನ್ನು ತನ್ನ ತಂಗಿ ಎಂದು ಭಾವಿಸಿ "ನಿನಗೆ ಯಾವುದೇ ಕಷ್ಟ ಬಂದರೂ ನನ್ನನ್ನು ನೆನಪಿಸಿಕೋ, ಆಗ ನಿನ್ನ ಅಣ್ಣನ ರೂಪದಲ್ಲಿ ನಿನ್ನ ಸಹಾಯಕ್ಕೆ ನಾನು ನಿಲ್ಲುತ್ತೇನೆ " ಎಂದು ಕೃಷ್ಣ ದ್ರೌಪದಿಗೆ ಮಾತು ಕೊಡುತ್ತಾನೆ. ಈ ಮಾತಿನ ಪ್ರಕಾರ ದ್ರೌಪದಿಯ ವಸ್ತ್ರಪರೋಹಣ ಮಾಡುವ ಸಮಯದಲ್ಲಿ, ಶ್ರೀ ಕೃಷ್ಣನು, ತನ್ನ ರಕ್ಷಣೆಗೆ ಅಂದು ದ್ರೌಪದಿ ಮಾಡಿದ ಸಹಾಯ ಮತ್ತು ತಾನು ಕೊಟ್ಟಂತಹ ಮಾತನ್ನು ನೆನೆದು, ದ್ರೌಪದಿಯ ಅಣ್ಣನ ರೂಪದಲ್ಲಿ ಹೋಗಿ ಆಕೆಯ ಮಾನವನ್ನು ಕಾಪಾಡುತ್ತಾನೆ. ಆದ್ದರಿಂದ ಈ ದಿನವನ್ನು ಅಣ್ಣ - ತಂಗಿಯರ ಭಾಂದವ್ಯದ ದಿನ "ರಕ್ಷಾಬಂಧನ " ದಿನವನ್ನಾಗಿ ಆಚರಣೆ ಮಾಡಲಾಗುತ್ತೆ ಎಂದು ಪುರಾಣಗಳ ಮೂಲಕ ನೋಡಬಹುದು.
ಇನ್ನೊಂದು ಪುರಾಣಗಳ ಪ್ರಕಾರ... ರಜಪೂತ ರಾಜರುಗಳ ಕಾಲದಲ್ಲಿ ಒಂದು ದೊಡ್ಡ ಯುಗ್ದ ನಡೆಯುತ್ತೆ. ಆ ಯುಗ್ದದಲ್ಲಿ ರಜಪೂತ ರಾಜ್ಯವೇ ಸೋಲುವ ಸಂದರ್ಭ. ರಜಪೂತ ರಾಜನನ್ನು ಹತ್ತಿಕ್ಕುವ ಸಮಯದಲ್ಲಿ ರಜಪೂತ ಮಹಾರಾಣಿ ಬಂದು, ತನ್ನ ಸೀರೆಯ ಸೆರಗಿನಿಂದ ಒಂದು ನೂಲನ್ನು ತೆಗೆದು ತನ್ನ ಮಹಾರಾಜನಿಗೆ ಯಾವುದೇ ತೊಂದರೆ ಮಾಡಬೇಡಿ, ನಾನು ನಿಮ್ಮ ತಂಗಿ ಎಂದು ಭಾವಿಸಿ ಎನ್ನುತ್ತಾ ನೂಲನ್ನು ತೆಗೆದು ರಜಪೂತ ರಾಜನನ್ನು ಹತ್ತಿಕ್ಕೋಕೆ ಬಂದವನಿಗೆ ನೂಲನ್ನು ಕಟ್ಟುತ್ತಾಳೆ. ಆಗ ಆತ ರಜಪೂತ ರಾಜನಿಗೆ ಜೀವಭಿಕ್ಷೆಯನ್ನು ನೀಡಿ ಹೋಗುತ್ತಾನೆ. ಅನ್ನುವ ವಿಚಾರನೂ ಇದೆ.
ಹೀಗೆ ಪುರಾಣಗಳನ್ನು ನೋಡಿದ ಪ್ರಕಾರ ರಕ್ಷಾಬಂಧನ ಅನ್ನೋದು ಒಂದು ರೀತಿಯಲ್ಲಿ " ರಕ್ಷಣೆಗಾಗಿ " ಮತ್ತು "ಅಣ್ಣ - ತಂಗಿಯ ಬಾಂಧವ್ಯಕ್ಕಾಗಿ " ಅನ್ನೋದನ್ನ ಕಾಣಬಹುದು. ರಕ್ಷಾಬಂಧನವನ್ನು ಕಟ್ಟಿ ಒಂದು ಒಳ್ಳೆಯ ಬಾಂಧವ್ಯವನ್ನು, ಮತ್ತು ತನಗೆ ಜೀವ ರಕ್ಷೆಯನ್ನು ಕೇಳಬಹುದು. ಈ ಬಂಧವ್ಯವನ್ನು ನಾವು ದೇಶ ಕಾಯೋ ಯೋಧರ ಜೊತೆಗೆ, ರಕ್ಷಣೆಗಾಗಿ ನಿಂತ ಪೊಲೀಸರಿಗೆ, ಆರೋಗ್ಯದ ಮೂಲಕ ಜೀವ ಉಳಿಸುವ ವೈದ್ಯರಿಗೆ, ದಾದಿಯರಿಗೆ, ಆಶಾ ಕಾರ್ಯಕರ್ತರಿಗೆ, ತನ್ನನ್ನು ಹೆತ್ತ ತಂದೆ - ತಾಯಿಗೆ ಇವರಿಗೆಲ್ಲರಿಗೂ ಕಟ್ಟುವ ಒಂದು ರಕ್ಷೆಯು ರಕ್ಷಾಬಂಧನವಾಗಿದೆ.
ಆದರೆ.., ಈಗಿನ ಸಂದರ್ಭದಲ್ಲಿ ರಕ್ಷಾಬಂಧನವನ್ನು ಬಲವಂತದ ಬಾಂಧವ್ಯಕ್ಕೆ ಕಟ್ಟುತ್ತಾರೆ. ಅಂದರೆ ಯಾವುದೇ ಒಬ್ಬ ಹುಡುಗ ತನಗೆ ಹಿಂಸೆ ಅಥವಾ ಪ್ರೀತಿ - ಪ್ರೇಮ ಮೂಲಕ ಕಿರುಕುಳ ಕೊಟ್ಟರೂ ಆತನಿಗೆ ರಕ್ಷಾಬಂಧನವನ್ನು ಕಟ್ಟಿ ಅಣ್ಣ - ತಂಗಿ ಬಾಂಧವ್ಯಕ್ಕೆ ಕರೆದೊಯ್ಯುತ್ತೇವೆ. ಆದರೆ ಇದು ರಕ್ಷಾಬಂಧನ ಹಬ್ಬದ ರೀತಿ, ನೀತಿ ಅಲ್ಲ. ಬಲವಂತವಾಗಿ ರಕ್ಷೆ ಕಟ್ಟುವುದರಿಂದ ಯಾವುದೇ ರಕ್ಷಣೆನು ಸಿಗಲ್ಲ, ಬಾಂಧವ್ಯನು ಹುಟ್ಟಲ್ಲ.
ನಿಶಾಂತ್ ಗೌಡ ಪುದುವೆಟ್ಟು
8296779142
0 ಕಾಮೆಂಟ್‌ಗಳು