ಪುತ್ತೂರು: ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ವಿಶ್ವ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳ ತಜ್ಞ ವೈದ್ಯರಾದ ರೊ.ಡಾ. ಶ್ರೀಕಾಂತ್ ರಾವ್ ಹಾಗೂ ಪತ್ರಕರ್ತರಾದ ರೋ.ಗಣೇಶ್ ಕಲ್ಲರ್ಪೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋ. ಸುಬ್ಬಪ್ಪ ಕೈಕಂಬ (ಯುವಜನ ಸೇವಾ ನಿರ್ದೇಶಕರು 2026-27), ರೋ. ಸುಜೀತ್ ಡಿ. ರೈ (ಯುವಜನ ಸೇವಾ ನಿರ್ದೇಶಕರು 2025-26), ರೋ. ಶ್ರೀಧರ್ ಆಚಾರ್ಯ (ಸಭಾಪತಿ 2026-27) ಹಾಗೂ ರೋ. ಕಿಶನ್ ಬಿ.ವಿ (ಸಭಾಪತಿ 2025-26) ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಬ್ ಅಧ್ಯಕ್ಷರಾದ ರೋ. ವಿನೀತ್ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷರಾದ ರೋ. ಶ್ರೀಕಾಂತ್ ಹಾಗೂ ನಿಯೋಜಿತ ಕಾರ್ಯದರ್ಶಿ ರೋ. ಸುಕನ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಾರದ ಸಭೆಯೂ ನಡೆಯಿತು. ಸಭೆಯಲ್ಲಿ ರೋ. ಶಶಿಧರ್, ರೋ. ನವೀನ್ ರೈ ಬನ್ನೂರ್, ರೋ. ನವೀನ್ ಚಂದ್ರ, ರೋ. ಸುಶಾಂತ್, ರೋ. ಅಖೀಲ್, ರೋ. ವಿಶಾಲ್, ರೋ. ಎಡ್ವರ್ಡ್ ಹಾಗೂ ರೋ. ಸೀಮಂತ್ ಉಪಸ್ಥಿತರಿದ್ದರು.
ಸಮಾಜದ ಆರೋಗ್ಯ ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಸಾಧಕರನ್ನು ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು.
0 ಕಾಮೆಂಟ್‌ಗಳು