ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕಲೆಯನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಹುಲಿವೇಷ ತಂಡಗಳ ಮನಮೋಹಕ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಆಕರ್ಷಣೆಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಳೆದ ಮೂರು ಆವೃತ್ತಿಗಳ ಯಶಸ್ಸಿನ ಬಳಿಕ ಈ ಬಾರಿಯ ಸೀಸನ್ ಇನ್ನಷ್ಟು ಅದ್ದೂರಿಯಾಗಿ ಆಯೋಜಿಸುವುದರೊಂದಿಗೆ ಸರ್ವರಿಗೂ ಆತ್ಮೀಯ ಸ್ವಾಗತವನ್ನು ವಿಜಯ ಸಾಮ್ರಾಟ್ (ರಿ.) ಪುತ್ತೂರು ಕೋರಿದೆ.
0 ಕಾಮೆಂಟ್‌ಗಳು