HEADLINES

ಕುಂಬಳೆ ಸಮೀಪ ಶಾಲಾ ಆವರಣದಲ್ಲಿ ಗಾಂಜಾ ಗಿಡ ಪತ್ತೆ; ಅಬಕಾರಿ ಇಲಾಖೆಯಿಂದ ತನಿಖೆ

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಬಂಬ್ರಾಣ ಸರ್ಕಾರಿ ಎಲ್‌ಪಿ ಶಾಲೆಯ ಆವರಣದಲ್ಲಿ ಗಾಂಜಾ ಗಿಡ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡಲು ಬಂದಿದ್ದ ಕೆಲ ಯುವಕರು ಅನುಮಾನಾಸ್ಪದ ಗಿಡವನ್ನು ಗಮನಿಸಿ ಪರಿಶೀಲಿಸಿದಾಗ ಅದು ಗಾಂಜಾ ಗಿಡವಾಗಿರುವುದು ತಿಳಿದುಬಂದಿದೆ.


ಈ ಕುರಿತು ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಿಡವನ್ನು ವಶಪಡಿಸಿಕೊಂಡಿದ್ದಾರೆ. ಗಿಡ ಸ್ವಯಂ ಬೆಳೆದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ನೆಡಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಶಾಲಾ ಆವರಣದಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಸ್ಥಳೀಯರು ಹಾಗೂ ಪೋಷಕರಲ್ಲಿ ಆತಂಕ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು